* ಹವಾಮಾನ ಬದಲಾವಣೆಯಿಂದ ಉಂಟಾಗುವ ವೈಫರೀತ್ಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಮಾರ್ಚ್ 23ರಂದು ವಿಶ್ವ ಹವಾಮಾನ ದಿನ (World Meteorological Day) ವನ್ನು ಆಚರಿಸಲಾಗುತ್ತಿದೆ.* WMO ಯ ಅಧಿಕೃತ ವೆಬ್‌ಸೈಟ್‌ನ ಪ್ರಕಾರ, "ಮುಂಚಿನ ಎಚ್ಚರಿಕೆ ಅಂತರವನ್ನು ಒಟ್ಟಿಗೆ ಮುಚ್ಚುವುದು". 2025 ರ ವಿಶ್ವ ಹವಾಮಾನ ದಿನದ ಥೀಮ್ ಆಗಿದೆ.* ಮಾನವನ ಸುರಕ್ಷತೆಗೆ ಮತ್ತು ಯೋಗಕ್ಷೇಮಕ್ಕೆ ಭೌಗೋಳಿಕ ಹವಾಮಾನ (Geographic climate) ಚೆನ್ನಾಗಿರುವುದು ಬಹಳ ಮುಖ್ಯ ಹವಾಮಾನ ನೈಸರ್ಗಿಕ ವಾತಾವರಣದ ಮೇಲೆ ಮಾನವನ ಆರೋಗ್ಯಯುತ ಬದುಕು ಅವಲಂಬಿಸಿದೆ.* ಹವಾಮಾನಶಾಸ್ತ್ರಜ್ಞರು (Meteorologists) ತಾಪಮಾನ, ಆರ್ದ್ರತೆ, ಒತ್ತಡ, ಗಾಳಿಯ ವೇಗ, ಮಳೆ ಮತ್ತು ಗಾಳಿಯ ಗುಣಮಟ್ಟವನ್ನು ಅಳೆಯಲು ಮಳೆ ಮಾಪಕ, ಅನಿಮೋಮೀಟರ್, ಥರ್ಮಾಮೀಟರ್ ಸೇರಿದಂತೆ ವಿವಿಧ ಉಪಕರಣಗಳನ್ನು ಬಳಸಿಕೊಂಡು ಹವಾಮಾನವನ್ನು ಮುನ್ಸೂಚನೆ ನೀಡುತ್ತಾರೆ.* ವಿಶ್ವ ಹವಾಮಾನ ದಿನದ ಇತಿಹಾಸ* 1950ರ ಮಾರ್ಚ್‌ 23ರಂದು ವಿಶ್ವ ಹವಾಮಾನ ಸಂಸ್ಥೆ ಒಪ್ಪಂದ ಅಸ್ತಿತ್ವಕ್ಕೆ ಬಂದಿತು. 1873ರಲ್ಲಿ ರಚನೆಯಾದ ಅಂತಾರಾಷ್ಟ್ರೀಯ ಹವಾಮಾನ ಸಂಸ್ಥೆಯು 1950ರಲ್ಲಿ WMO ಆಗಿ ಬದಲಾಯಿತು.* 1950 ಮಾರ್ಚ್‌ 23ರಂದು ವಿಶ್ವ ಹವಾಮಾನ ಸಂಸ್ಥೆಯು ವಿಶ್ವ ಹವಾಮಾನ ದಿನವನ್ನು ಆಚರಿಸಲು ಆರಂಭಿಸಿತು. ಜನರ ಯೋಗ ಕ್ಷೇಮ, ಸುರಕ್ಷತೆಗೆ ಹವಾಮಾನದ ಕೊಡುಗೆ ಅತ್ಯಂತ ಮಹತ್ವವನ್ನು ತಿಳಿಸಲು ಈ ದಿನವನ್ನು ಆಚರಿಸುತ್ತ ಬರಲಾಗಿದೆ.* ಹವಾಮಾನವು ಪ್ರತಿ ಕ್ಷಣ ಕ್ಷಣಕ್ಕೂ ಬದಲಾಗುವುದರಿಂದ ವಿಶ್ವದ ಎಲ್ಲಾ ರಾಷ್ಟ್ರಗಳು ಹವಾಮಾನ ವರದಿಗೆ ಬಹಳಷ್ಟು ಮಹತ್ವ ನೀಡುತ್ತವೆ.* ಭೂಮಿಯ ಮೇಲಿನ ಹವಾಮಾನ ವೈಪರಿತ್ಯವನ್ನು ತಡೆಯುವುದು ಹಾಗೂ ಅನಾಹುತಗಳ ಬಗ್ಗೆ ಮುನ್ನೆಚ್ಚರಿಕೆ ನೀಡುವ ಸಲುವಾಗಿ ವಿಶ್ವ ಹವಾಮಾನ ದಿನವು ಮಹತ್ವದ್ದಾಗಿದೆ.* ಈ ಹಿನ್ನಲೆಯಲ್ಲಿ ಈ ವಿಶೇಷ ದಿನದಂದು ವಿವಿಧ ಸಂಘ ಸಂಸ್ಥೆಗಳು ಹವಾಮಾನ ಬದಲಾವಣೆಯಿಂದ ಆಗುವ ವ್ಯತ್ಯಯ್ಯಗಳ ಬಗ್ಗೆ ಅರಿವು ಮೂಡಿಸಲು ಜಾಗೃತಿ ಕಾರ್ಯಾಗಾರ, ಅಭಿಯಾನಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತವೆ.