* ಪ್ರತಿ ವರ್ಷ ಮಾರ್ಚ್ 21 ರಂದು ದೈನಂದಿನ ಜೀವನದಲ್ಲಿ ಅರಣ್ಯ ಸಂಪನ್ಮೂಲದ ಪಾತ್ರ ಮತ್ತು ಅದರ ವಿನಾಶದಿಂದ ಆಗುವ ದುಷ್ಟಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ವಿಶ್ವ ಅರಣ್ಯ ದಿನವನ್ನು ಆಚರಿಸಲಾಗುತ್ತದೆ.* ವಿಶ್ವ ಅರಣ್ಯ ದಿನದ 2025 ರ ಥೀಮ್ 'ಅರಣ್ಯಗಳು ಮತ್ತು ಆಹಾರ' ಎಂಬುದು ಥೀಮ್ ಆಗಿದೆ.* ಆಹಾರ ಮತ್ತು ಕೃಷಿ ಸಂಸ್ಥೆಯ (FAO) ಸಮ್ಮೇಳನದ 16 ನೇ ಅಧಿವೇಶನದಲ್ಲಿ 1971 ರಲ್ಲಿ "ವಿಶ್ವ ಅರಣ್ಯ ದಿನ" ಆಚರಿಸಲು ಮತ ಹಾಕಿತು. 2007 ರಿಂದ 2012 ರವರೆಗೆ ಸೆಂಟರ್ ಫಾರ್ ಇಂಟರ್ನ್ಯಾಷನಲ್ ಫಾರೆಸ್ಟ್ರಿ ರಿಸರ್ಚ್ (CIFOR) ಆರು ಅರಣ್ಯ ದಿನಗಳನ್ನು ನಡೆಸಿತು.* ಅರಣ್ಯದ ಸಹಯೋಗದ ಪಾಲುದಾರಿಕೆಯೊಂದಿಗೆ, 2011 ಅನ್ನು ಅರಣ್ಯಗಳ ವರ್ಷವೆಂದು ಘೋಷಿಸಲಾಯಿತು. ನವೆಂಬರ್ 28, 2012 ರಂದು, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಮಾರ್ಚ್ 21 ಅನ್ನು ವಿಶ್ವ ಅರಣ್ಯ ದಿನವನ್ನಾಗಿ ಆಚರಿಸುವುದಾಗಿ ಘೋಷಿಸಿತು. * 2019ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ದೇಶದ ಒಟ್ಟು ಅರಣ್ಯ ಮತ್ತು ಮರಗಳ ವ್ಯಾಪ್ತಿಯಲ್ಲಿ 2,261 ಚದರ ಕಿ.ಮೀ ಹೆಚ್ಚಳವಾಗಿದೆ. ಈ ಪೈಕಿ 1,540 ಚ.ಕಿ.ಮೀ ಅರಣ್ಯ ಪ್ರದೇಶ ಹೆಚ್ಚಳವಾಗಿದ್ದರೆ, ವೃಕ್ಷಗಳ ವ್ಯಾಪ್ತಿಯು 721 ಚ.ಕಿ.ಮೀ. ಹೆಚ್ಚಾಗಿದೆ.* ಅಭಿವೃದ್ಧಿ ನೆಪದಲ್ಲಿ ಮರಗಳನ್ನು ಕಡಿಯುವದು, ಅರಣ್ಯಗಳಲ್ಲಿ ರಸ್ತೆಗಳ ನಿರ್ಮಾಣ, ಕೈಗಾರಿಕೆಗಳ ಸ್ಥಾಪನೆ, ಜಲವಿದ್ಯುತ್ ಘಟಕಗಳ ನಿರ್ಮಾಣವು ಅರಣ್ಯಗಳ ನಾಶಕ್ಕೆ ಕಾರಣವಾಗಿದೆ. * ಭಾರತದ ಅರಣ್ಯಪ್ರದೇಶವು 2015ರಲ್ಲಿ 7,01, 645 ಚದರ ಕಿಲೋ ಮೀಟರ್ ಇತ್ತು, 2021ರ ವೇಳೆಗೆ ಆ ಪ್ರಮಾಣ 7,13,534.18 ಚದರ ಕಿಲೋ ಮೀಟರ್ ಏರಿಕೆಯಾಗಿದೆ.* ಅರಣ್ಯ ಪ್ರದೇಶದಲ್ಲಿ ಹೆಚ್ಚಳವನ್ನು ಕಂಡಿರುವ ಮೊದಲ ಮೂರು ರಾಜ್ಯಗಳು ಆಂಧ್ರ ಪ್ರದೇಶ (647 ಚದರ ಕಿಮೀ) ನಂತರ ತೆಲಂಗಾಣ (632 ಚದರ ಕಿಮೀ) ಮತ್ತು ಒಡಿಶಾ (537 ಚದರ ಕಿಮೀ) ಆಗಿವೆ. ಕರ್ನಾಟಕ ಏಳನೇ ಸ್ಥಾನದಲ್ಲಿದೆ.* 17 ರಾಜ್ಯಗಳಲ್ಲಿ ಮಾತ್ರ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಅರಣ್ಯಪ್ರದೇಶವಿದ್ದು, ಉಳಿದ ರಾಜ್ಯಗಳು ಕಡಿಮೆ ಅರಣ್ಯ ಪ್ರದೇಶವನ್ನು ಹೊಂದಿವೆ. ಕರ್ನಾಟಕದಲ್ಲಿ ಕೇವಲ ಶೇ. 20.19ರಷ್ಟು ಮಾತ್ರ ಅರಣ್ಯವಿದೆ ಎಂದು ಇತ್ತೀಚಿನ ಅಂಕಿ-ಅಂಶಗಳು ಬಹಿರಂಗಪಡಿಸಿವೆ.