* ಆಯುಧ ಕಾರ್ಖಾನೆ ದಿನವನ್ನು ಪ್ರತಿ ವರ್ಷ ಮಾರ್ಚ್ 18ರಂದು ಆಚರಿಸಲಾಗುತ್ತದೆ. ಇದು 1801ರಲ್ಲಿ ಕೋಲ್ಕತ್ತಾದ ಬಳಿ ಬ್ರಿಟಿಷ್ ಆಡಳಿತದಲ್ಲಿಯೇ ಪ್ರಥಮ ಆಯುಧ ಕಾರ್ಖಾನೆ ಸ್ಥಾಪನೆಯಾದ ದಿನವನ್ನು ಸ್ಮರಿಸುತ್ತದೆ.* ಭಾರತದಲ್ಲಿ ಮೊದಲ ಆಯುಧ ಕಾರ್ಖಾನೆ 1802ರಲ್ಲಿ ಕೋಸಿಪುರ್, ಕೋಲ್ಕತ್ತಾದಲ್ಲಿ ಕಾರ್ಯಾರಂಭ ಮಾಡಿತು. 2021ರಲ್ಲಿ ಆಯುಧ ಕಾರ್ಖಾನೆ ಮಂಡಳಿಯನ್ನು ಏಳು ರಕ್ಷಣಾ ಸಾರ್ವಜನಿಕ ಕ್ಷೇತ್ರ ಘಟಕಗಳಾಗಿ (DPSUs) ಪುನರ್ ರಚನೆ ಮಾಡಲಾಯಿತು.ಭಾರತೀಯ ಆಯುಧ ಕಾರ್ಖಾನೆಗಳ ಇತಿಹಾಸ :- 1775ರಲ್ಲಿ ಫೋರ್ಟ್ ವಿಲಿಯಂ, ಕೋಲ್ಕತ್ತಾದಲ್ಲಿ ಬ್ರಿಟಿಷರು Board of Ordnance ಸ್ಥಾಪಿಸಿದರು.- 1787ರಲ್ಲಿ ಇಷಾಪುರದಲ್ಲಿ ಮೊತ್ತಮೊದಲ ಗನ್ಪೌಡರ್ ಕಾರ್ಖಾನೆ ಸ್ಥಾಪನೆಯಾಯಿತು.- 1801ರಲ್ಲಿ ಕೋಸಿಪುರ್ನಲ್ಲಿ Gun Carriage Agency ಆರಂಭಗೊಂಡು, 1802ರ ಮಾರ್ಚ್ 18ರಂದು ಉತ್ಪಾದನೆ ಆರಂಭವಾಯಿತು.- 1947ರಲ್ಲಿ ಭಾರತ ಸ್ವಾತಂತ್ರ್ಯ ಪಡೆಯುವ ಹೊತ್ತಿಗೆ 18 ಆಯುಧ ಕಾರ್ಖಾನೆಗಳು ಇದ್ದವು, ಇದು ಹೀಗೆಯೇ 41ಕ್ಕೆ ವಿಸ್ತರಣೆಯಾಯಿತು.ಆಯುಧ ಕಾರ್ಖಾನೆಗಳ ಮಹತ್ವ :* ಭಾರತೀಯ ಸೇನೆ, ವಾಯುಸೇನೆ, ನೌಕಾಪಡೆಯಿಗೆ ಅವಶ್ಯಕ ಸಲಕರಣೆಗಳನ್ನು ಒದಗಿಸುವ "ನಾಲ್ಕನೇ ರಕ್ಷಣಾ ಭುಜ" ಎಂದೇ ಕರೆಯಲ್ಪಡುತ್ತದೆ.* ಪ್ರಪಂಚದ 37ನೇ ಅತಿ ದೊಡ್ಡ ಆಯುಧ ಉತ್ಪಾದನಾ ಸಂಸ್ಥೆ, ಏಷ್ಯಾದಲ್ಲಿ 2ನೇ ದೊಡ್ಡದು, ಹಾಗೂ ಭಾರತದ ಅತಿದೊಡ್ಡ ರಕ್ಷಣಾ ಉತ್ಪಾದಕ ಸಂಸ್ಥೆಯಾಗಿದೆ* 2021ರ ಅಕ್ಟೋಬರ್ನಲ್ಲಿ OFB ಅನ್ನು ಏಳು ಹೊಸ ರಕ್ಷಣಾ ಪಿಎಸ್ಯುಗಳಾಗಿ ವಿಂಗಡಿಸಲಾಯಿತು.* ಈ ಕ್ರಮದಿಂದ ರಕ್ಷಣಾ ಉತ್ಪಾದನೆಯಲ್ಲಿ ಸ್ವಾವಲಂಬನೆ, ಸ್ಪರ್ಧಾತ್ಮಕತೆ ಮತ್ತು ಕಾರ್ಯಕ್ಷಮತೆ ಹೆಚ್ಚಳ ಉದ್ದೇಶಿಸಲಾಗಿತ್ತು.