* ಪ್ರತಿ ವರ್ಷ ಮಾರ್ಚ್‌ ಎರಡನೇ ಬುಧವಾರದಂದು ರಾಷ್ಟ್ರೀಯ ಧೂಮಪಾನ ರಹಿತ ದಿನವನ್ನು ಆಚರಿಸಲಾಗುತ್ತದೆ. ರಾಷ್ಟ್ರೀಯ ಧೂಮಪಾನ ರಹಿತ ದಿನವನ್ನು 2024 ಮಾರ್ಚ್ 13 ರಂದು ಆಚರಿಸಲಾಗುತ್ತಿದೆ. * ಧೂಮಪಾನದ ವಿನಾಶಕಾರಿ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಧೂಮಪಾನವನ್ನು ತ್ಯಜಿಸಲು ವ್ಯಕ್ತಿಗಳನ್ನು ಪ್ರೇರೇಪಿಸಲು ಮೀಸಲಾಗಿರುವ ದಿನವಾಗಿದೆ. ಇದು ಆರೋಗ್ಯಕರ ಜೀವನ ವಿಧಾನಗಳು ಮತ್ತು ಹೊಗೆ ಮುಕ್ತ ವಾತಾವರಣವನ್ನು ಉತ್ತೇಜಿಸುವ ದಿನವಾಗಿದೆ.* " ತಂಬಾಕು ಉದ್ಯಮದ ಹಸ್ತಕ್ಷೇಪದಿಂದ ಮಕ್ಕಳನ್ನು ರಕ್ಷಿಸುವುದು "2024 ರ ಧೂಮಪಾನ ನಿಷೇಧ ದಿನದ ಘೋಷವಾಕ್ಯ ಆಗಿದೆ.* ನೊ ಸ್ಮೋಕಿಂಗ್ ಡೇ ಇತಿಹಾಸವು 1984 ರಲ್ಲಿ 'ನೋ ಸ್ಮೋಕಿಂಗ್ ಡೇ' ಎಂಬ ಚಾರಿಟಿಯನ್ನು ಸ್ಥಾಪಿಸಿದಾಗಿನಿಂದ ಗುರುತಿಸಲ್ಪಟ್ಟಿದೆ. ಅದೇ ವರ್ಷದಲ್ಲಿ ಬುಧವಾರದಂದು ಮೊದಲ ಧೂಮಪಾನ ನಿಷೇಧ ದಿನವನ್ನು ಆಚರಿಸಲಾಗಿತ್ತು.* ನೊ ಸ್ಮೋಕಿಂಗ್ ಡೇ ಆಚರಣೆ ಮತ್ತು ಚಟುವಟಿಕೆಗಳು ಧೂಮಪಾನಿಗಳನ್ನು ಧೂಮಪಾನವನ್ನು ತ್ಯಜಿಸಲು ಪ್ರೋತ್ಸಾಹಿಸುತ್ತದೆ.