* ಮೈಸೂರು-ಚೆನ್ನೈ ಮಧ್ಯೆ ವಂದೇ ಭಾರತ್, ಕಲಬುರಗಿ ಭಾಗದ ಜನತೆಯ ಬಹು ದಿನಗಳ ಬೇಡಿಕೆಯಾಗಿದ್ದ ಕಲಬುರಗಿ ಬೆಂಗಳೂರು ವಂದೇ ಭಾರತ್ ರೈಲು, ಪ್ರಧಾನ ಮಂತ್ರಿ ಜನೌಷಧ ಕೇಂದ್ರ ಸಹಿತ ವಿವಿಧ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 12ರಂದು ವರ್ಚುವಲ್ ಮೂಲಕ ಉದ್ಘಾಟಿಸಲಿದ್ದಾರೆ.* ಸ್ಥಳೀಯ ಕುಶಲಕರ್ಮಿ ಗಳು, ಕುಂಬಾರರು, ನೇಕಾರರು, ಕೈಮಗ್ಗ ನೇಕಾರರು, ಕುಶಲ ಕರ್ಮಿಗಳು, ಬುಡಕಟ್ಟು ಜನಾಂಗದವರಿಗೆ ವರ್ಧಿತ ಜೀವನೋಪಾಯ ಮತ್ತು ಕೌಶಲ ಅಭಿವೃದ್ಧಿ ಅವಕಾಶಗಳನ್ನು ಒದಗಿಸಲು ಬಜೆಟ್‌ನಲ್ಲಿ ಒಂದು ದೇಶ, ಒಂದು ಉತ್ಪನ್ನ ಯೋಜನೆ ಘೋಷಿಸಲಾಗಿತ್ತು. ಅದರಂತೆ ಬೆಂಗಳೂರು ವಿಭಾಗದ 40 ರೈಲು ನಿಲ್ದಾಣಗಳಲ್ಲಿ ಮಳಿಗೆಗಳನ್ನು ನಿಯೋಜಿಸಲಾಗಿದೆ ಎಂದು ವಿವರಿಸಿದ್ದಾರೆ.* ಪ್ರಯಾಣಿಕರಿಗೆ ಅಗತ್ಯ ಸೌಲಭ್ಯ ಒದಗಿಸುವುದಕ್ಕಾಗಿ ಸರ್ ಎಂ.ವಿ. ಟರ್ಮಿನಲ್ ಮತ್ತು ಬಂಗಾರಪೇಟೆ ರೈಲು ನಿಲ್ದಾಣಗಳಲ್ಲಿ ಪ್ರಧಾನ ಮಂತ್ರಿ ಜನೌಷಧ ಕೇಂದ್ರಗಳು ಆರಂಭಗೊಳ್ಳಲಿವೆ ಎಂದು ತಿಳಿಸಿದರು.* ರೈಲು ಸಂಚಾರವನ್ನು ವೇಗಗೊಳಿಸಲು ದೊಡ್ಡಬಳ್ಳಾಪುರದ ಒಡ್ಡರಹಳ್ಳಿಯಲ್ಲಿ ಗತಿ ಶಕ್ತಿ ಮಲ್ಟಿಮೋಡಲ್ ಕಾರ್ಗೋ ಟರ್ಮಿನಲ್ ಆರಂಭಗೊಳ್ಳಲಿದೆ. ಪೆನುಕೊಂಡದಲ್ಲಿರುವ ಗೂಡ್ಸ್ ಶೆಡ್ ಅನ್ನು ಪುನರ್ ಅಭಿವೃದ್ಧಿ ಮಾಡಲಾಗಿದೆ ಎಂದರು.* ಥಣಿಸಂದ್ರದಲ್ಲಿ 270 ಕೋಟಿ ವೆಚ್ಚದಲ್ಲಿ 'ವಂದೇ ಭಾರತ್ ಸ್ಲೀಪರ್‌' ಕೋಚ್ ರೈಲುಗಳ ಕಾರ್ಯಾಗಾರ ಮತ್ತು ಡಿಪೊವನ್ನು ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಪ್ರಧಾನಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.