* ಭಾರತವು ಮಾರ್ಚ್ 11 ರಿಂದ 13 ರವರೆಗೆ ನವದೆಹಲಿಯಲ್ಲಿ ತನ್ನ ಮೊದಲ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಗ್ರ್ಯಾಂಡ್ ಪ್ರಿಕ್ಸ್ ಆಯೋಜಿಸುತ್ತಿದೆ, ಇದರಲ್ಲಿ 20 ಕ್ಕೂ ಹೆಚ್ಚು ದೇಶಗಳ ಪ್ಯಾರಾ ಅಥ್ಲೀಟ್ಗಳು 90 ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ.* ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆಯುವ ಗ್ರ್ಯಾಂಡ್ ಪ್ರಿಕ್ಸ್ನಲ್ಲಿ ಜರ್ಮನಿ, ಜಪಾನ್, ಆಸ್ಟ್ರೇಲಿಯಾ ಸೇರಿದಂತೆ ಹಲವು ದೇಶಗಳ ಕ್ರೀಡಾಪಟುಗಳು ಪಾಲ್ಗೊಳ್ಳುತ್ತಾರೆ.* ಏಷ್ಯನ್ ಪ್ಯಾರಾಲಿಂಪಿಕ್ ಸಮಿತಿ (ಎಪಿಸಿ) ಅಧ್ಯಕ್ಷ ಮಜೀದ್ ರಷೇದ್ ಮತ್ತು ಏಷ್ಯನ್ ಪ್ಯಾರಾಲಿಂಪಿಕ್ ಸಮಿತಿಯ ಸಿಇಒ ತಾರೆಕ್ ಸೌಯಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.* ಭಾರತದಲ್ಲಿ ಗ್ರ್ಯಾಂಡ್ ಪ್ರಿಕ್ಸ್ ಆಯೋಜಿಸುವುದು ಪ್ಯಾರಾ-ಸ್ಪೋರ್ಟ್ಸ್ಗೆ ದೇಶದ ಸಮರ್ಪಣೆಯನ್ನು ತೋರಿಸುತ್ತದೆ. ಇದು ಕೇವಲ ಸ್ಪರ್ಧೆಯಷ್ಟೇ ಅಲ್ಲ, ಭವಿಷ್ಯದ ಅಂತರರಾಷ್ಟ್ರೀಯ ಪಂದ್ಯಾವಳಿಗಳಿಗೆ ಪೂರ್ವನಿದರ್ಶನವೂ ಆಗಿದೆ. ಎಂದು ಪ್ಯಾರಾಲಿಂಪಿಕ್ ಸಮಿತಿ ಅಧ್ಯಕ್ಷ ದೇವೇಂದ್ರ ಜಜಾರಿಯಾ ಹೇಳಿದ್ದಾರೆ.* ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಗ್ರ್ಯಾಂಡ್ ಪ್ರಿಕ್ಸ್ ನವದೆಹಲಿ 2025 ಸ್ಪರ್ಧೆಯಲ್ಲಿ ಸ್ಪ್ರಿಂಟ್, ಮಧ್ಯಮ-ದೂರ ಓಟ, ಜಂಪ್ ಮತ್ತು ಥ್ರೋ ಈವೆಂಟ್ಗಳು ನಡೆಯಲಿದ್ದು, ಭಾರತದ ಪ್ಯಾರಾ-ಅಥ್ಲೀಟ್ಗಳಿಗೆ ತವರು ನೆಲದಲ್ಲಿ ಅಗ್ರ ಆಟಗಾರರ ವಿರುದ್ಧ ಸ್ಪರ್ಧಿಸಲು ಅವಕಾಶ ಒದಗಿಸುತ್ತದೆ. ಈ ಕಾರ್ಯಕ್ರಮವು ಭಾರತದ ಪ್ಯಾರಾ-ಸ್ಪೋರ್ಟ್ಸ್ ವಲಯವನ್ನು ವಿಸ್ತರಿಸಿ, ಅಥ್ಲೀಟ್ಗಳಿಗೆ ಹೆಚ್ಚು ಅರಿವು ಮತ್ತು ಬೆಂಬಲ ಒದಗಿಸಲಿದೆ.