* ನೈಸರ್ಗಿಕ ವಿಪತ್ತು, ಅಪಘಾತ ಮತ್ತು ತುರ್ತು ಪರಿಸ್ಥಿತಿಗಳಿಂದ ಜನರು ಮತ್ತು ಆಸ್ತಿಗಳನ್ನು ರಕ್ಷಿಸಲು ನಾಗರಿಕ ರಕ್ಷಣಾ ಕ್ರಮಗಳ ಮಹತ್ವವನ್ನು ಒತ್ತಿಹೇಳುವ ವಿಶ್ವ ನಾಗರಿಕ ರಕ್ಷಣಾ ದಿನವನ್ನು ಪ್ರತಿವರ್ಷ ಮಾರ್ಚ್ 1ರಂದು ಆಚರಿಸಲಾಗುತ್ತದೆ.* ಈ ದಿನದ ಆಚರಣೆ 1990ರಲ್ಲಿ ಪ್ರಾರಂಭವಾಯಿತು, ಇದಕ್ಕೆ 1972ರಲ್ಲಿ ಜಾರಿಗೆ ಬಂದ ಅಂತರಾಷ್ಟ್ರೀಯ ನಾಗರಿಕ ರಕ್ಷಣಾ ಸಂಘಟನೆ (ICDO) ಯ ಸಂವಿಧಾನ ಪೂರಕವಾಗಿದೆ. ICDO 1950ರಲ್ಲಿ ಸ್ಥಾಪಿತಗೊಂಡಿದ್ದು, ಇದರ ಪ್ರಧಾನ ಕಚೇರಿ ಸಿಟ್ಟರ್ಲೆಂಡ್ನ ಜಿನೀವಾದಲ್ಲಿದೆ.* ಐಎಸ್ ಡಿಒದ 'ಪ್ರಸ್ತುತ ಸಂವಿಧಾನವನ್ನು 1972ರಲ್ಲಿ ಸಂಸ್ಥೆಯ ಸದಸ್ಯ ರಾಷ್ಟ್ರಗಳು ಅನುಮೋದಿಸಿದವು ಮತ್ತು ಆ ಸಂವಿಧಾನವು ಅದೇ ವರ್ಷ ಮಾರ್ಚ್ 1ರಂದು ಜಾರಿಗೆ ಬಂದಿತು. * 1990ರಲ್ಲಿ ಮೊದಲ ಬಾರಿಗೆ ವಿಶ್ವ ನಾಗರಿಕ ರಕ್ಷಣಾ ದಿನವನ್ನು ಆಚರಿಸಲಾಯಿತು.* ಭಯೋತ್ಪಾದನೆ ನಾಗರಿಕ ಸಂರಕ್ಷಣೆಗೆ ತೊಂದರೆ ಉಂಟುಮಾಡುತ್ತದೆ. ಯುದ್ಧ, ಸಂಘರ್ಷ ಕಡಿಮೆ ಮಾಡುವುದು ಈ ದಿನದ ಉದ್ದೇಶವಾಗಿದೆ.2024ರ ಧ್ಯೇಯವಾಕ್ಯ:"ನಾಗರಿಕ ರಕ್ಷಣೆ ಮತ್ತು ಹೆಚ್ಚುತ್ತಿರುವ ಜನಸಂಖ್ಯೆಗೆ ಭದ್ರತೆಯ ಖಾತರಿ" ನಾಗರಿಕ ಸಂರಕ್ಷಣೆಗೆ ಕಂಟಕವಾಗಿರುವ ಭಯೋತ್ಪಾದನೆ. ಯುದ್ಧ, ಸಂಘರ್ಷಗಳನ್ನು ಕಡಿಮೆ ಮಾಡುವುದು ಈ ಧೈಯವಾಕ್ಯದ ಉದ್ದೇಶವಾಗಿದೆ.
ಪ್ರಮುಖ ಚಟುವಟಿಕೆಗಳು:- ಜನರಲ್ಲಿ ಅಪಾಯ ಮತ್ತುತುರ್ತು ಸೇವೆಗಳ ಕುರಿತು ಜಾಗೃತಿ ಮೂಡಿಸುವುದು- ಅನಾಹುತ ಪೀಡಿತರಿಗೆ ಆಶ್ರಯ ಮತ್ತು ನೆರವು ಒದಗಿಸುವುದು- ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಜತೆ ಕೈಜೋಡಿಸುವುದು- ಸಂತ್ರಸ್ತರಿಗೆ ವೈದ್ಯಕೀಯ ನೆರವು ನೀಡುವುದು- ಭೂಕಂಪ, ಪ್ರವಾಹ, ಅಗ್ನಿ ದುರಂತದಲ್ಲಿ ಸಿಲುಕಿದವರ ರಕ್ಷಣೆಗೆ ಕಾರ್ಯನಿರ್ವಹಿಸುವುದು
ICDO 61 ಸದಸ್ಯ ರಾಷ್ಟ್ರಗಳು, 23 ಅಂಗಸಂಸ್ಥೆಗಳೊಂದಿಗೆ ನಾಗರಿಕ ರಕ್ಷಣಾ ಪಡೆಗಳ ತರಬೇತಿ ಮತ್ತು ಮಾನವ ಸಂಪತ್ತು ಅಭಿವೃದ್ಧಿಗೆ ಸಹಕಾರ ನೀಡುತ್ತಿದೆ.