* ಬಾಲಿವುಡ್ ನ ಖ್ಯಾತಿ ನಟಿ ಕತ್ರಿನಾ ಕೈಫ್ ಅವರು ಮಾಲ್ಡೀವ್ಸ್’ನ ಪ್ರವಾಸೋದ್ಯಮ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಮಾಲ್ಡೀವ್ಸ್ ತನ್ನ ಪ್ರವಾಸೋದ್ಯಮ ಆಕರ್ಷಣೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದು, ಈ ಹಿನ್ನೆಲೆ ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರನ್ನು ತನ್ನ ಹೊಸ ಜಾಗತಿಕ ಪವಾಸೋದ್ಯಮ ರಾಯಭಾರಿಯಾಗಿ ನೇಮಿಸಿಕೊಂಡಿದೆ. * ಮಂಗಳವಾರ(ಜೂನ್ 10) ಮಾಲ್ಡೀವ್ಸ್ ಮಾರ್ಕೆಟಿಂಗ್ ಮತ್ತು ಪಬ್ಲಿಕ್ ರಿಲೇಶನ್ಸ್ ಕಾರ್ಪೊರೇಷನ್ (MMPRC) ಈ ಘೋಷಣೆಯನ್ನು ಮಾಡಿದ್ದು, “ಕತ್ರಿನಾ ಕೈಫ್ ಅವರನ್ನು ನಮ್ಮ ಜಾಗತಿಕ ಬ್ರಾಂಡ್ ರಾಯಭಾರಿಯಾಗಿ ಹೊಂದಿರುವುದು ನಮಗೆ ತುಂಬಾ ಹೆಮ್ಮೆಯ ಕ್ಷಣವಾಗಿದೆ ಎಂದು MMPRC ಯ ವ್ಯವಸ್ಥಾಪಕ ನಿರ್ದೇಶಕ ಥೋಯಿಬ್ ಮೊಹಮ್ಮದ್ ಹೇಳಿದ್ದಾರೆ.* ಮೊಹಮ್ಮದ್ ಅವರು ಜನಪ್ರಿಯತೆ, ಜಾಗತಿಕ ಮನರಂಜನಾ ಉದ್ಯಮದಲ್ಲಿ ಅವರ ಪ್ರಭಾವದೊಂದಿಗೆ ಸೇರಿ, ಪ್ರಪಂಚದಾದ್ಯಂತ, ವಿಶೇಷವಾಗಿ ಭಾರತದಿಂದ ಹೆಚ್ಚಿನ ಸಂದರ್ಶಕರನ್ನು ಆಕರ್ಷಿಸಲು ನಮಗೆ ಸಹಾಯ ಮಾಡುತ್ತದೆ ಎಂದಿದ್ದಾರೆ.* ಮಾಲ್ಡೀವ್ಸ್ ಭಾರತೀಯ ಪ್ರಯಾಣಿಕರಿಗೆ ಬಹಳ ಹಿಂದಿನಿಂದಲೂ ನೆಚ್ಚಿನ ತಾಣವಾಗಿದೆ ಮತ್ತು ಭಾರತ ಮತ್ತು ಜಾಗತಿಕವಾಗಿ ತನ್ನ ಅಪಾರ ಅಭಿಮಾನಿಗಳನ್ನು ಹೊಂದಿರುವ ಕೈಫ್, ಮಾಲ್ಡೀವ್ಸ್ನ ಪ್ರವಾಸೋದ್ಯಮ ಪ್ರೊಫೈಲ್ ಅನ್ನು ಮತ್ತಷ್ಟು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ.