* ಮಾಲ್ಡೀವ್ಸ್ ರಾಜಧಾನಿ ಮಾಲೆಯಲ್ಲಿ ಇಂದು(ಜುಲೈ 26) ನಡೆಯುತ್ತಿರುವ 60ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ಗೌರವ ಅತಿಥಿ’ಯಾಗಿ ಪಾಲ್ಗೊಂಡಿದ್ದಾರೆ.* ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಮಾಲ್ಡೀವ್ಸ್ಗೆ ಅಧಿಕೃತ ಭೇಟಿಗೆ ಹೋಗಿದ್ದಾರೆ.* ಶುಕ್ರವಾರ(ಜುಲೈ 25) ಆಯೋಜಿಸಲಾದ ರಾಜ್ಯ ಔತಣಕೂಟದಲ್ಲಿ ಮಾತನಾಡಿದ ಪ್ರಧಾನಿ, ಆಹ್ವಾನಕ್ಕಾಗಿ ಧನ್ಯವಾದ ತಿಳಿಸಿ, ಮಾಲ್ಡೀವ್ಸ್ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರಿದರು.* ಮಾಲ್ಡೀವ್ಸ್ ಅಧ್ಯಕ್ಷರು, ಪ್ರಧಾನಿ ಮೋದಿ ಅವರನ್ನು ಭಾರತದ ಎರಡನೇ ಅತ್ಯಧಿಕ ಅವಧಿಗೆ ಸೇವೆ ಸಲ್ಲಿಸಿದ ಪ್ರಧಾನಿಯಾಗಿ ಅಭಿನಂದಿಸಿದರು. * ಭಾರತದ ನಾಯಕತ್ವ ಹಾಗೂ ಭಾರತ–ಮಾಲ್ಡೀವ್ಸ್ ನಡುವಿನ ಬಲವಾದ ಸಂಬಂಧಗಳ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.* ಭಾರತವು ಮಾಲ್ಡೀವ್ಸ್ನ ನಿಕಟವಾದ ಮತ್ತು ವಿಶ್ವಾಸಾರ್ಹ ಪಾಲುದಾರ ಎಂದು ಅವರು ಹೇಳಿದ್ದು, ಈ ಸಹಕಾರದಿಂದ ಭದ್ರತೆ, ಆರೋಗ್ಯ, ಶಿಕ್ಷಣ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಪ್ರಗತಿ ಕಂಡುಬಂದಿದೆ ಎಂದು ವಿವರಿಸಿದರು.