* ಶೀತಲ ಸಮರದ ಕಾಲಘಟ್ಟದಲ್ಲಿ ಅಮೇರಿಕಾದ ವಿದೇಶಾಂಗ ನೀತಿ ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಾಗೂ ನೊಬೆಲ್ ಪುರಸ್ಕೃತ ಹೆನ್ರಿ ಕಿಸ್ಸಿಂಜರ್ ಅವರು ನವೆಂಬರ್ 29 ರಂದು ನಿಧನರಾಗಿದ್ದಾರೆ.* 'ವಾಟರ್‌ಗೇಟ್‌' ಹಗರಣದ ಬಳಿಕ ನಿಕ್ಸನ್ ಅಧಿಕಾರದಿಂದ ಕೆಳಗಿಳಿದರು. ಬಳಿಕ ಅಧ್ಯಕ್ಷ ಗಾದಿಗೆ ಹೇರಿದ ಜೆರಾಲ್ಡ್ ಫೋರ್ಡ್ ಅವಧಿಯಲ್ಲಿಯೂ ಹೆನ್ರಿ ಕಿಸ್ಸಿಂಜರ್ ಅವರು ವಿದೇಶಾಂಗ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು.* ಅಮೆರಿಕದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ನ್ಯೂಯಾರ್ಕ್ ಗವರ್ನರ್ ನೆಲ್ಸನ್ ರಾಕ್ಸಿಲ್ಲರ್ ಅವರಿಗೆ ಸಲಹೆಗಾರರಾಗಿದ್ದರು. ಆದರೆ, ರಾಕ್ಸಿಲ್ಲರ್ ಅವರ ರಾಜಕೀಯ ವಿರೋಧಿಯಾಗಿದ್ದ ರಿಚರ್ಡ್ ನಿಕ್ಸನ್ 1968ರಲ್ಲಿ ಮೇಲುಗೈ ಸಾಧಿಸಿದ ತಕ್ಷಣವೇ, ನಿಕ್ಸನ್ ಬಣಕ್ಕೆ ಸೇರ್ಪಡೆಗೊಂಡರು.* ವಿಯೆಟ್ನಾಂ ಮೇಲೆ ಅಮೆರಿಕ ನಡೆಸಿದ ಯುದ್ಧದಲ್ಲಿ ಹೆನ್ರಿ ಅವರ 1973ರಲ್ಲಿ ವಿಯೆಟ್ನಾಂ ಕದನ ವಿರಾಮಕ್ಕೆ ಜಂಟಿಯಾಗಿ ಸಂಧಾನದ ಹೊಣೆ ಹೊತ್ತಿದ್ದರು ಎಂದು ಹೆನ್ರಿಗೆ ಜಂಟಿಯಾಗಿ ಶಾಂತಿ ನೊಬೆಲ್ ಪ್ರಶಸ್ತಿ ಘೋಷಿಸಲಾಗಿತ್ತು.