* ಮಾಜಿ ಹಣಕಾಸು ಕಾರ್ಯದರ್ಶಿ ಅಜಯ್ ಸೇಠ್ ಅವರನ್ನು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (IRDAI) ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. * ಈ ಹುದ್ದೆ, ದೇಬಾಶಿಶ್ ಪಾಂಡಾ ಅವರ ಅಧಿಕಾರಾವಧಿ ಮಾರ್ಚ್ 2025ರಲ್ಲಿ ಅಂತ್ಯವಾದ ನಂತರದಿಂದ ಖಾಲಿಯಿತ್ತು.* ಅಜಯ್ ಸೇಠ್ ಅವರು 1987ರ ಬ್ಯಾಚ್ನ ಕರ್ನಾಟಕ ಕೇಡರ್ನ ಐಎಎಸ್ ಅಧಿಕಾರಿ. ಅವರು 2021ರಿಂದ ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. * ಈ ವರ್ಷದ ಆರಂಭದಲ್ಲಿ, ಸೆಬಿ ಅಧ್ಯಕ್ಷರಾಗಿ ತುಹಿನ್ ಕಾಂತ ಪಾಂಡೆ ನೇಮಕಗೊಂಡ ನಂತರ ಅವರು ಕಂದಾಯ ಕಾರ್ಯದರ್ಶಿಯಾಗಿ ಹೆಚ್ಚುವರಿ ಜವಾಬ್ದಾರಿ ಹೊತ್ತಿದ್ದರು.* ಸೇಠ್ ಅವರು ಮೆಕ್ಯಾನಿಕಲ್ ಎಂಜಿನಿಯರಿಂಗ್ ಹಾಗೂ ಎಂ.ಬಿ.ಎ ಪದವೀಧರರಾಗಿದ್ದು, ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ಹಲವು ಪ್ರಮುಖ ಹಣಕಾಸು ಸಂಬಂಧಿತ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. * ಹಣಕಾಸು ನೀತಿ, ಮೂಲಸೌಕರ್ಯ ಅಭಿವೃದ್ಧಿ, ತೆರಿಗೆ ಮತ್ತು ಅಭಿವೃದ್ಧಿ ಹಣಕಾಸಿನಲ್ಲಿ ಅವರು ವಿಶೇಷ ಪ್ರಭಾವ ಬೀರಿದ್ದಾರೆ.