Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
'ಮಾಹೇ' ಸಮರ ನೌಕೆ ಭಾರತೀಯ ನೌಕಾದಳಕ್ಕೆ ಹಸ್ತಾಂತರ
25 ಅಕ್ಟೋಬರ್ 2025
* ಭಾರತೀಯ ನೌಕಾದಳದ ಕರಾವಳಿ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ, ದೇಶೀಯವಾಗಿ ನಿರ್ಮಿಸಲಾದ
ಜಲಾಂತರ್ಗಾಮಿ-ನಿರೋಧಕ ಕರಾವಳಿ ಸಮರ ನೌಕೆ (Anti-Submarine Warfare Shallow Water Craft - ASW SWC)
ಸರಣಿಯ ಮೊದಲ ನೌಕೆಯಾದ
'ಮಾಹೇ'
ಯಶಸ್ವಿಯಾಗಿ ಸೇವೆಗೆ ಸೇರ್ಪಡೆಗೊಂಡಿದೆ.
* 'ಮಾಹೇ' ನೌಕೆಯನ್ನು ಕೊಚ್ಚಿನ್ ಶಿಪ್ಯಾರ್ಡ್ ಲಿಮಿಟೆಡ್ (CSL) ನಿಂದ ಭಾರತೀಯ ನೌಕಾದಳಕ್ಕೆ
ಗುರುವಾರ (ಅಕ್ಟೋಬರ್ 23, 2025)
ಹಸ್ತಾಂತರಿಸಲಾಯಿತು.
* ಭಾರತೀಯ ನೌಕಾಪಡೆಗೆ ಒದಗಿಸಲಾಗುತ್ತಿರುವ ಎಂಟು ASW SWC ಹಡಗುಗಳ ಸರಣಿಯಲ್ಲಿ 'ಮಾಹೇ'
ಮೊದಲನೆಯದಾಗಿದೆ
.
* ಈ ಸಮರ ನೌಕೆಯು ಸಂಪೂರ್ಣವಾಗಿ ದೇಶೀಯವಾಗಿ (Indigenous) ವಿನ್ಯಾಸ ಮತ್ತು ನಿರ್ಮಾಣಗೊಂಡಿದೆ. ಇದು ಭಾರತ ಸರ್ಕಾರದ
'ಆತ್ಮನಿರ್ಭರ ಭಾರತ' (Aatmanirbhar Bharat)
ಯೋಜನೆಯಡಿ ರಕ್ಷಣಾ ವಲಯದಲ್ಲಿ ಸ್ವಾವಲಂಬನೆ ಸಾಧಿಸುತ್ತಿರುವುದಕ್ಕೆ ಒಂದು ಮಹತ್ವದ ನಿದರ್ಶನವಾಗಿದೆ. ಶೇ. 80 ಕ್ಕಿಂತಲೂ ಹೆಚ್ಚಿನ ಉಪಕರಣಗಳು ದೇಶೀಯವಾಗಿ ತಯಾರಾಗಿವೆ.
* ಆಳವಿಲ್ಲದ ನೀರಿನ ಪ್ರದೇಶದಲ್ಲಿ (Shallow Water) ಶತ್ರು ಜಲಾಂತರ್ಗಾಮಿ ನೌಕೆಗಳನ್ನು (Submarine) ಪತ್ತೆಹಚ್ಚಲು ಮತ್ತು ನಾಶಪಡಿಸಲು ಈ ನೌಕೆಯನ್ನು ಸಜ್ಜುಗೊಳಿಸಲಾಗಿದೆ. ಮತ್ತು ಸಮುದ್ರದಲ್ಲಿ ನಿರಂತರ ಕಣ್ಗಾವಲು (Surveillance) ಮತ್ತು ಪೆಟ್ರೋಲಿಂಗ್ ಕಾರ್ಯಗಳನ್ನು ನಿರ್ವಹಿಸುವುದು.
* ಕೊಚ್ಚಿನ್ ಶಿಪ್ಯಾರ್ಡ್ನ ನಿರ್ದೇಶಕರು (ಕಾರ್ಯಾಚರಣೆ) ಆದ
ಎಸ್. ಹರಿಕೃಷ್ಣನ್
ಮತ್ತು 'ಮಾಹೇ' ನೌಕೆಯ ಕಮಾಂಡಿಂಗ್ ಆಫೀಸರ್ (ನಾಮನಿರ್ದೇಶಿತ) ಆದ
ಕಮಾಂಡರ್ ಅಮಿತ್ ಚಂದ್ರ ಚೌಬೆ
ಅವರು ಔಪಚಾರಿಕವಾಗಿ ಹಸ್ತಾಂತರ ದಾಖಲೆಗಳಿಗೆ ಸಹಿ ಹಾಕಿದರು. ಈ ಮೂಲಕ 'ಮಾಹೇ' ಅಧಿಕೃತವಾಗಿ ಭಾರತೀಯ ನೌಕಾಪಡೆಯ ಭಾಗವಾಯಿತು. ಮುಂದಿನ ದಿನಗಳಲ್ಲಿ ಉಳಿದ ಏಳು ASW SWC ನೌಕೆಗಳು ಸಹ ಹಂತ ಹಂತವಾಗಿ ಸೇರ್ಪಡೆಗೊಳ್ಳುವ ನಿರೀಕ್ಷೆಯಿದೆ.
Take Quiz
Loading...