* ವಿಶ್ವದ ಮೊದಲ 'ವೇದ ಗಡಿಯಾರ' (Vikramaditya Vaidik Clock) ಈ ವರ್ಷ ಮಾರ್ಚ್ 01 ರಂದು ಮಧ್ಯಪ್ರದೇಶದ ಪವಿತ್ರ ನಗರ ಉಜ್ಜಯಿನಿಯಲ್ಲಿ ಅನಾವರಣಗೊಳ್ಳಲು ಸಿದ್ಧವಾಗಿದೆ.* ಈ ವಿಶಿಷ್ಟ ಗಡಿಯಾರವು ವೈದಿಕ ಹಿಂದೂ ಪಂಚಾಂಗ, ಗ್ರಹಗಳ ಸ್ಥಾನಗಳು, ಮುಹೂರ್ತ, ಜ್ಯೋತಿಷ್ಯ ಲೆಕ್ಕಾಚಾರಗಳು, ಭವಿಷ್ಯವಾಣಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪ್ರದರ್ಶಿಸುತ್ತದೆ ಮತ್ತು ಭಾರತೀಯ ಪ್ರಮಾಣಿತ ಸಮಯ (IST) ಮತ್ತು ಗ್ರೀನ್‌ವಿಚ್ ಸರಾಸರಿ ಸಮಯ (GMT) ಅನ್ನು ಸಹ ಸೂಚಿಸುತ್ತದೆ. * ಉಜ್ಜಯಿನಿಯ ಸರಕಾರಿ ಜಿವಾಜಿ ವೀಕ್ಷಣಾಲಯದಲ್ಲಿ 85 ಅಡಿ ಎತ್ತರದ ಟವರ್‌ನಲ್ಲಿ ವೈದಿಕ ಗಡಿಯಾರ ಅಳವಡಿಸಲಾಗಿದೆ.* ಸಮಯದ ಲೆಕ್ಕಾಚಾರವು ಒಂದು ಸೂರ್ಯೋದಯದಿಂದ ಇನ್ನೊಂದು ಸೂರ್ಯೋದಯದವರೆಗಿನ ಅವಧಿಯನ್ನು ಆಧರಿಸಿದೆ.* "ಎರಡು ಸೂರ್ಯೋದಯಗಳ ನಡುವಿನ ಸಮಯವನ್ನು 30 ಭಾಗಗಳಾಗಿ ವಿಭಾಗಿಸಲಾಗುತ್ತದೆ. ಐಎಸ್‌ಡಿ ಪ್ರಕಾರ ಈ 30 ಮಹೂರ್ತಗಳು ತಲಾ 48 ನಿಮಿಷಗಳದ್ದಾಗಿರುತ್ತದೆ. 300 ವರ್ಷಗಳ ಹಿಂದೆಯೇ ಉಜ್ಜಯಿನಿಯಿಂದಲೇ ಜಗತ್ತು ಕಾಲಮಾನವನ್ನು ನಿರ್ಧರಿಸುತ್ತಿತ್ತು. * ಸಮಯ ತಿಳಿಯಲೆಂದೇ ಉಜ್ಜಯಿನಿಯಲ್ಲಿ ಒಂದು ಯಂತ್ರವೂ ಇತ್ತು ಎಂದು ತಜ್ಞರು ತಿಳಿಸುತ್ತಾರೆ. ಕರ್ಕಾಟಕ ಸಂಕ್ರಾಂತಿ ವೃತ್ತವು ಉಜ್ಜಯಿನಿಯ ಮೂಲಕ ಹಾದುಹೋಗುತ್ತದೆ' ಎಂದು ಮಹಾರಾಜ ವಿಕ್ರಮಾದಿತ್ಯ ಸಂಶೋಧನ ಕೇಂದ್ರದ ನಿರ್ದೇಶಕರಾದ ಶ್ರೀರಾಮ್ ತಿವಾರಿ ಅವರು ತಿಳಿಸಿದ್ದಾರೆ.