* 2021 ರ ಜಾಗತಿಕ ರೋಗಗಳು, ಗಾಯಗಳು ಮತ್ತು ಅಪಾಯದ ಅಂಶಗಳ ಅಧ್ಯಯನ (GBD) ದ ದತ್ತಾಂಶವನ್ನು ಆಧರಿಸಿದ ಇತ್ತೀಚಿನ ಲ್ಯಾನ್ಸೆಟ್ ಅಧ್ಯಯನವು , 1990 ರಿಂದ 2021 ರವರೆಗೆ ಭಾರತದ ಆತ್ಮಹತ್ಯೆ ಸಾವಿನ ಪ್ರಮಾಣದಲ್ಲಿ 31.5% ಇಳಿಕೆಯನ್ನು ಎತ್ತಿ ತೋರಿಸುತ್ತದೆ. * ಜಾಗತಿಕವಾಗಿ, ಸರಾಸರಿ ಪ್ರತಿ 43 ಸೆಕೆಂಡುಗಳಿಗೆ ಒಬ್ಬ ವ್ಯಕ್ತಿ ಆತ್ಮಹತ್ಯೆಯಿಂದ ಸಾಯುತ್ತಾನೆ ಎಂದು ಅಧ್ಯಯನವು ಬಹಿರಂಗಪಡಿಸುತ್ತದೆ. ಭಾರತದಲ್ಲಿ, ಆತ್ಮಹತ್ಯೆ ಪ್ರಮಾಣವು ಗಮನಾರ್ಹವಾಗಿ ಕಡಿಮೆಯಾಗಿದೆ, ವಿವಿಧ ಮಾನಸಿಕ ಆರೋಗ್ಯ ಉಪಕ್ರಮಗಳು ಮತ್ತು ನೀತಿ ಸುಧಾರಣೆಗಳು ಈ ಕುಸಿತದಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ.* ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ (GBD) 2021 ಅಧ್ಯಯನದ ಪ್ರಕಾರ, 1990ರಲ್ಲಿ ಪ್ರತಿಯೊಂದು ಲಕ್ಷ ಜನಸಂಖ್ಯೆಗೆ 18.9 ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ, 2021ರಲ್ಲಿ ಇದು 13ಕ್ಕೆ ಇಳಿಯಿತು.* ಮಹಿಳೆಯರಲ್ಲಿ ಆತ್ಮಹತ್ಯೆ ಪ್ರಮಾಣವು ಹೆಚ್ಚು ಇಳಿಕೆ ಕಂಡುಬಂದಿದ್ದು, 1990ರಲ್ಲಿ ಪ್ರತಿ ಲಕ್ಷ ಜನರಲ್ಲಿ 16.8 ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡರೆ, 2021ರಲ್ಲಿ ಇದು 10.3ಕ್ಕೆ ಇಳಿಯಿತು. ಪುರುಷರಲ್ಲಿ 20.9ರಿಂದ 15.7ಕ್ಕೆ ಇಳಿಕೆಯಾಗಿರುವುದು ದಾಖಲಾಗಿದೆ.
* 2020ರಲ್ಲಿ ಭಾರತದೊಳಗೆ ಶಿಕ್ಷಣ ಪಡೆದ ಮಹಿಳೆಯರಲ್ಲಿ ಆತ್ಮಹತ್ಯೆ ಪ್ರಮಾಣ ಹೆಚ್ಚು ಕಂಡುಬಂದಿದ್ದು, ಕುಟುಂಬ ಸಮಸ್ಯೆಗಳು ಪ್ರಮುಖ ಕಾರಣವಾಗಿದ್ದವು ಎಂದು ವಾಷಿಂಗ್ಟನ್ ವಿಶ್ವವಿದ್ಯಾಲಯದ ಸಂಶೋಧಕರು ವಿವರಿಸಿದ್ದಾರೆ.* ಜಾಗತಿಕವಾಗಿ, ಪ್ರತಿ ವರ್ಷ ಸುಮಾರು 7.4 ಲಕ್ಷ ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.ಅಂದರೆ, ಪ್ರತಿ 43 ಸೆಕೆಂಡ್ ಗೆ ಒಬ್ಬ ವ್ಯಕ್ತಿ ಜೀವತ್ಯಾಗ ಮಾಡಿಕೊಳ್ಳುತ್ತಾರೆ. 1990ರಿಂದ ವಿಶ್ವದ ಆತ್ಮಹತ್ಯೆ ಪ್ರಮಾಣವು ಶೇಕಡಾ 40ರಷ್ಟು ಇಳಿದಿದೆ. ಇದರಲ್ಲಿ ಮಹಿಳೆಯರಲ್ಲಿ ಶೇಕಡಾ 50ರಷ್ಟು ಮತ್ತು ಪುರುಷರಲ್ಲಿ ಶೇಕಡಾ 34ರಷ್ಟು ಇಳಿಕೆ ಕಂಡುಬಂದಿದೆ.* ಆತ್ಮಹತ್ಯೆಗೆ ಸಂಬಂಧಿಸಿದ ಅಪಮಾನವನ್ನು ನಿವಾರಿಸುವುದು ಹಾಗೂ ಮಾನಸಿಕ ಆರೋಗ್ಯ ಸೇವೆಗಳಿಗೆ ಪ್ರವೇಶವನ್ನು ಸುಲಭಗೊಳಿಸುವುದು ಇನ್ನೂ ಅಗತ್ಯವಾಗಿದೆ ಎಂದು ಮುಖ್ಯ ಸಂಶೋಧಕರಾದ ಡಾ. ಮೊಹ್ಸೆನ್ ನಘಾವಿ ತಿಳಿಸಿದ್ದಾರೆ.