* ‘ಜನ ವಿಶ್ವಾಸ್ (ತಿದ್ದುಪಡಿ)–2025’ ಮಸೂದೆ ಲೋಕಸಭೆಯಲ್ಲಿ ಮಂಡನೆಯಾಯಿತು. ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಅವರು ಈ ಮಸೂದೆಯನ್ನು ಮಂಡಿಸಿದರು.* ಇದರ ಉದ್ದೇಶವು ಸಣ್ಣ ಪುಟ್ಟ ತಪ್ಪುಗಳಿಗೆ ಶಿಕ್ಷೆಯಿಂದ ವಿನಾಯಿತಿ ನೀಡಿ, ಸುಗಮ ಜೀವನ ನಿರ್ವಹಣೆ ಮತ್ತು ಸುಲಲಿತ ವ್ಯವಹಾರಕ್ಕೆ ಅವಕಾಶ ಕಲ್ಪಿಸುವುದಾಗಿದೆ.* ಮಸೂದೆಯನ್ನು ಪರಿಶೀಲನಾ ಸಮಿತಿಗೆ ವರ್ಗಾಯಿಸಲಾಗಿದೆ. ಸಂಸತ್ನ ಮುಂದಿನ ಅಧಿವೇಶನದ ಮೊದಲ ದಿನದಲ್ಲಿ ಈ ಸಮಿತಿ ವರದಿ ಸಲ್ಲಿಸಲಿದೆ.* ಪ್ರತಿಪಕ್ಷಗಳು ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ವಿಷಯವಾಗಿ ಪ್ರತಿಭಟನೆ ನಡೆಸಿದರೂ ಮಸೂದೆಯನ್ನು ಮಂಡಿಸಲಾಯಿತು.* ಒಟ್ಟು 335 ನಿಬಂಧನೆಗಳನ್ನು ತಿದ್ದುಪಡಿ ಮಾಡುವ ಪ್ರಸ್ತಾವವಿದ್ದು, 288 ನಿಬಂಧನೆಗಳನ್ನು ಅಪರಾಧಮುಕ್ತಗೊಳಿಸಲಾಗುವುದು. 67 ನಿಬಂಧನೆಗಳು ಸುಗಮ ಜೀವನಕ್ಕೆ ಸಂಬಂಧಿಸಿರಲಿವೆ.