* ಮತದಾನ ಪ್ರಮಾಣ ಪ್ರಕಟಿಸಲು ವಿಳಂಬ ಮಾಡುವ ಮೂಲಕ ತೀವ್ರ ಟೀಕೆ ಗುರಿಯಾಗಿರುವ ಕೇಂದ್ರ ಲೋಕಸಭಾ ಚುನಾವಣಾ ಆಯೋಗ ಮೊದಲ ಐದು ಹಂತದ ಚುನಾವಣೆಗಳಲ್ಲಿ ಚಲಾವಣೆಯಾದ ಮತಗಳ ಸಂಖ್ಯೆಯನ್ನು ಕ್ಷೇತ್ರವಾರು ಅಂಕಿಅಂಶಗಳನ್ನು ಮೇ 25 ರಂದು (ಶನಿವಾರ) ಬಿಡುಗಡೆ ಮಾಡಿದೆ.* ಲೋಕಸಭಾ ಚುನಾವಣೆಯ ಅಂಕಿ ಅಂಶಗಳ ಅನ್ವಯ ಐದು ಹಂತಗಳಲ್ಲಿ ಮತದಾನ ಮಾಡಲು ಅರ್ಹರಾಗಿದ್ದವರು 76.4 ಕೋಟಿ ಮತದಾರರ ಪೈಕಿ 50.72 ಕೋಟಿ, ಅಂದರೆ ಸರಾಸರಿ ಶೇಕಡಾ 66.39ರಷ್ಟು ಜನರು ತಮ್ಮ ಮತ ಚಲಾಯಿಸಿದ್ದಾರೆ.* ಚುನಾವಣೆ ನಾಲ್ಕನೆಯ ಹಂತದಲ್ಲಿ ಶೇಕಡ 66.95  ರಷ್ಟು ಜನರು ಮತ ಚಲಾಯಿಸಿದ್ದಾರೆ ಎಂದು ಕೇಂದ್ರ ಸರಕಾರ ಆಯೋಗವು ತಿಳಿಸಿತ್ತು. ಆದರೆ 67.45 ಕೋಟಿ ಮತದಾರರ ಪೈಕಿ 45.1 ಕೋಟಿ ರಷ್ಟು ಜನರು ಮತ ಚಲಾಯಿಸಿದ್ದಾರೆ.* ಲೋಕಸಭಾ ಚುನಾವಣೆಯು 427 ಕ್ಷೇತ್ರಗಳ ಪೈಕಿ 97 ಮತ ಕ್ಷೇತ್ರಗಳಲ್ಲಿ ಮತದಾರರ ಸಂಖ್ಯೆವು  20 ಲಕ್ಷಕ್ಕಿಂತ ಹೆಚ್ಚಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.* ಲೋಕಸಭಾ ಚುನಾವಣೆಯ 6 ನೇ ಹಂತದ ಮತದಾನವು ಮೇ 25 ರಂದು ಮುಕ್ತಾಯವಾಗಿದ್ದು, ಪ್ರಾಥಮಿಕ ಮಾಹಿತಿ ಪ್ರಕಾರ ಶೇ 59 .06 ರಷ್ಟು ಮತದಾನ ನಡೆದಿದೆ.* ಅತಿ ಹೆಚ್ಚು ಮತದಾದರೂ ಇರುವ ಕ್ಷೇತ್ರಗಳು ಮಲ್ಕಜೆಗೇರಿ : 37,79,596ಬೆಂಗಳೂರು ಉತ್ತರ : 32,14,496ಗಾಜಿಯಾಬಾದ್ : 29,45,487* ಅತಿ ಹೆಚ್ಚು ಸಂಖ್ಯೆಯಲ್ಲಿ ಮತದಾನ ಆಗಿರುವ ಕ್ಷೇತ್ರಗಳು - ಧುಬ್ರಿ : 24 ,50,041- ಮಲ್ಕಾಜರಿ : 19,19,131- ಬೆಂಗಳೂರು ಗ್ರಾಮಾಂತರ : 19,14030