* ಹದಿನೆಂಟನೇ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಏಪ್ರಿಲ್ 26 ಮತ್ತು ಮೇ 7 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ.* ಲೋಕಸಭೆ ಚುಣಾವಣೆಗೆ ಮೊದಲ ಹಂತದಲ್ಲಿ ದಕ್ಷಿಣ ಕರ್ನಾಟಕದಲ್ಲಿ 14 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, ಮೇ 7 ರಂದು ಎರಡನೇ ಹಂತದಲ್ಲಿ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.* ಒಟ್ಟು 2 ಕೋಟಿ 88 ಲಕ್ಷದ, 19, 342 ಮತದಾರಿದ್ದಾರೆ. 30,602 ಮತಗಟ್ಟೆಗಳಿವೆ. ಅಲ್ಲದೆ 1 ಲಕ್ಷ 40 ಸಾವಿರ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. 5000 ಸೂಕ್ಷ್ಮ ವೀಕ್ಷಕರಿದ್ದರೆ ಭದ್ರತೆಗಾಗಿ 50000 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಈ ಪೈಕಿ 65 ಅರೆ ಸೇನಾ ಪಡೆ ಸಿಬ್ಬಂದಿಯೂ ಇದ್ದಾರೆ.* ಕರ್ನಾಟಕದ ದಕ್ಷಿಣ ಮತ್ತು ಮಧ್ಯ ಕ್ಷೇತ್ರಗಳಿಂದ ಸಂಸದ ಸ್ಥಾನಕ್ಕೆ ಒಟ್ಟು 247 ಅಭ್ಯರ್ಥಿಗಳು (226 ಪುರುಷರು ಮತ್ತು 21 ಮಹಿಳೆಯರು) ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್ ಎಲ್ಲಾ 14 ಸ್ಥಾನಗಳಲ್ಲಿ ಸ್ಪರ್ಧಿಸಿದರೆ, ಬಿಜೆಪಿ 11 ಸ್ಥಾನಗಳಲ್ಲಿ ಮತ್ತು ಮೂರು ಜೆಡಿಎಸ್ ಹಾಸನ, ಮಂಡ್ಯ ಮತ್ತು ಕೋಲಾರದಿಂದ ಸ್ಪರ್ಧಿಸುತ್ತಿವೆ.* ರಾಜ್ಯದಲ್ಲಿರುವ 28 ಲೋಕಸಭಾ ಕ್ಷೇತ್ರಗಳಲ್ಲಿ ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಸೆಂಟ್ರಲ್, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ, ಉಡುಪಿ- ಚಿಕ್ಕಮಗಳೂರು, ಹಾಸನ, ದಕ್ಷಿಣಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ ಮತ್ತು ಮೈಸೂರು, ಚಾಮರಾಜನಗರ ಈ 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಏಪ್ರಿಲ್ 26 ರಂದು (ಶುಕ್ರವಾರ) ನಡೆಯಲಿದೆ.* ಉಳಿದ 14 ಕ್ಷೇತ್ರಗಳಿಗೆ ಮೇ 7ರಂದು ದಾವಣಗೆರೆ, ಶಿವಮೊಗ್ಗ ಕ್ಷೇತ್ರಗಳನ್ನು ಒಳಗೊಂಡಂತೆ ಉತ್ತರದ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ ರಾಯಚೂರು, ಬೀದ‌ರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರ . ಕನ್ನಡಗಳ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.* ಲೋಕಸಭೆ ಚುನಾವಣೆಗೆ 7 ಹಂತಗಳಲ್ಲಿ ಮತದಾನ ನಡೆಯುತ್ತಿದ್ದು, ಮೊದಲ ಹಂತದ ಮತದಾನ ಏಪ್ರಿಲ್ 19ರಂದು ನಡೆದಿದೆ. ಏಪ್ರಿಲ್ 26ರಂದು 2ನೇ ಹಂತದ ಮತದಾನ ನಡೆಯಲಿದ್ದು, ಒಟ್ಟು 13 ರಾಜ್ಯಗಳ 89 ಸ್ಥಾನಗಳಿಗೆ ಮತದಾನ ನಡೆಯಲಿದೆ.* ಮತದಾನದ ಸಮಯದಲ್ಲಿ ವೋಟರ್ ಸ್ಲಿಪ್ ಹಾಗೂ ಎಪಿಕ್ ಕಾರ್ಡ್ ತೋರಿಸಬೇಕು. ಅದಿಲ್ಲದಿದ್ದರೆ ಆಧಾರ್ ಕಾರ್ಡ್, ನರೇಗಾ ಜಾಬ್ ಕಾರ್ಡ್, ಪಾಸ್‌ಪೋರ್ಟ್, ಪ್ಯಾನ್ ಕಾರ್ಡ್, ಭಾವಚಿತ್ರವಿರುವ ಪಿಂಚಣಿ ದಾಖಲೆ, ಕೇಂದ್ರ, ರಾಜ್ಯ ಸರ್ಕಾರ, ಪಿಎಸ್ಕು, ಪಬ್ಲಿಕ್ ಲಿಮಿಟೆಡ್ ಕಂಪನಿಗಳು ಉದ್ಯೋಗಿಗಳಿಗೆ ನೀಡಿದ ಭಾವಚಿತ್ರವಿರುವ ಗುರುತಿನ ಚೀಟಿ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ನೀಡಿರುವ ಅಂಗವೈಕಲ್ಯದ ಐಡಿ ಕಾರ್ಡ್‌ಗಳನ್ನು ತೋರಿಸಿ ಮತ ಚಲಾಯಿಸಬಹುದಾಗಿದೆ.* ಅಂಗವಿಕಲರು ಮತ್ತು ಹಿರಿಯ ನಾಗರಿಕರ ಮತದಾರರಿಗೆ ಯಾವುದೇ ಅಡೆತಡೆ ಇಲ್ಲದೆ ಮತಗಟ್ಟೆಗಳಿಗೆ ಬಂದು ಮತದಾನ ಮಾಡಲು ರಾಂಪ್ (ಇಳಿಜಾರು) ರೈಲಿಂಗ್, ಗಾಲಿ ಕುರ್ಚಿಗಳು, ಅಂಧ ಮತದಾರರಿಗೆ ಅಗತ್ಯವಿರುವಂತೆ ಮತಯಂತ್ರದಲ್ಲಿ ಬೈಲ್ ಲಿಪಿ ಸಂಖ್ಯೆಗಳು, ಬೈಲ್ ಲಿಪಿಯ ಡಮ್ಮಿ ಮತಪತ್ರ ಬೂತಕನ್ನಡಿ, ಶ್ರವಣದೋಷವುಳ್ಳ ಮತದಾರರಿಗೆ ಅಗತ್ಯವಿರುವಂತ ಸಂಜ್ಞಾ ಭಾಷಾ ತಜ್ಞರ ನೆರವು ನೀಡಲಾಗಿದೆ.* ನಗರ ಪ್ರದೇಶದ ಮತದಾರರಿಗೆ ವೋಟರ್ ಸ್ಲಿಪ್ ಹಿಂಬದಿಯಲ್ಲಿ ಕ್ಯೂಆರ್ ಕೋಡ್ ಮುದ್ರಿಸಲಾಗಿದೆ. ಅದನ್ನು ಸ್ಕ್ಯಾನ್ ಮಾಡಿದರೆ ಮತಗಟ್ಟೆ ಮಾರ್ಗ ತೋರಿಸಲಿದೆ.* ನೀತಿ ಸಂಹಿತಿ ಉಲ್ಲಂಘಿಸಿದ್ದು ಕಂಡು ಬಂದಲ್ಲಿ ಜನಸಾಮಾನ್ಯರು ಸಿವಿಜಿಲ್ ಆ್ಯಪ್‌ನಲ್ಲಿ ಚುನಾವಣಾ ಆಯೋಗಕ್ಕೆ ದೂರು ದಾಖಲಿಸಬಹುದಾಗಿದೆ. ದೂರು ದಾಖಲುಗೊಂಡ 100 ನಿಮಿಷಗಳಲ್ಲಿ ಕ್ರಮ ಕೈಗೊಳ್ಳಲಾಗುವುದು.* ಟೋಲ್ ಫ್ರೀ ಇಪ್ಪತ್ತನಾಲ್ಕು ಗಂಟೆ 1950 ಸಹಾಯವಾಣಿ ಲಭ್ಯವಿರಲಿದೆ. ದೂರು ದಾಖಲಿಸಲು ಹಾಗೂ ಕುಂದುಕೊರತೆಗೆ ಪರಿಹಾರ ಕೋರಿ ಈ ಸಂಖ್ಯೆಗೆ ಕರೆ ಮಾಡಬಹುದಾಗಿದೆ.* 13 ರಾಜ್ಯಗಳಲ್ಲಿ ಕರ್ನಾಟಕ ಒಳಗೊಂಡು ಅಸ್ಸಾಂ, ಬಿಹಾರ, ಛತೀಸ್‌ಗಢ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ ರಾಜಸ್ಥಾನ, ತ್ರಿಪುರ, ಉತ್ತರ ಪ್ರದೇಶ, ಪಶ್ಚಿಮಬಂಗಾಳ, : ಜಮ್ಮು-ಕಾಶ್ಮೀರ ಸೇರಿವೆ.- ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು* ಚಿತ್ರದುರ್ಗ- ಗೋವಿಂದ ಕಾರಜೋಳ* ಬೆಂಗಳೂರು ಉತ್ತರ- ಶೋಭಾ ಕರಂದ್ಲಾಜಿ* ಉಡುಪಿ-ಚಿಕ್ಕಮಗಳೂರು- ಕೋಟಾ ಶ್ರೀನಿವಾಸ ಪೂಜಾರಿ* ಮಂಡ್ಯ- ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್ ಡಿ ಕುಮಾರಸ್ವಾಮಿ* ತುಮಕೂರು - ವಿ.ಸೋಮಣ್ಣ* ಬೆಂಗಳೂರು ಕೇಂದ್ರ - ಪಿ.ಸಿ ಮೋಹನ್* ಚಿಕ್ಕಬಳ್ಳಾಪುರ-ಡಾ.ಕೆ.ಸುಧೀಕರ್* ಹಾಸನ - ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ* ಬೆಂಗಳೂರು ದಕ್ಷಿಣ - ತೇಜಸ್ವಿ ಸೂರ್ಯ* ಚಾಮರಾಜನಗರ- ಎಸ್ ಬಾಲರಾಜ್* ಬೆಂಗಳೂರು ಗ್ರಾಮಾಂತರ - ಡಾ ಸಿಎನ್ ಮಂಜುನಾಥ್* ಕೋಲಾರ - ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿ ಎಂ ಮಲ್ಲೇಶ್ ಬಾಬು* ಮೈಸೂರು-ಕೊಡಗು -ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್* ದಕ್ಷಿಣ ಕನ್ನಡ- ಕ್ಯಾಪ್ಟನ್ ಬ್ರಿಜೇಶ್ ಚೌಟಾ- ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ* ಚಿತ್ರದುರ್ಗ-ಬಿಎನ್ ಚಂದ್ರಪ್ಪ* ಬೆಂಗಳೂರು ಗ್ರಾಮಾಂತರ- ಡಿ.ಕೆ ಸುರೇಶ್* ಬೆಂಗಳೂರು ಉತ್ತರ - ಪ್ರೊ.ಎಂ.ವಿ ರಾಜೀವ್ ಗೌಡ* ಬೆಂಗಳೂರು ಕೇಂದ್ರ - ಮನ್ಸೂರ್ ಆಲಿ ಖಾನ್* ಬೆಂಗಳೂರು ದಕ್ಷಿಣ - ಸೌಮ್ಯ ರೆಡ್ಡಿ* ಮೈಸೂರು- ಕೊಡಗು - ಎಂ.ಲಕ್ಷ್ಮಣ್* ಉಡುಪಿ-ಚಿಕ್ಕಮಗಳೂರು - ಡಾ.ಜಯಪ್ರಕಾಶ್ ಹೆಗ್ಡೆ* ತುಮಕೂರು-ಎಸ್ ಪಿ ಮುದ್ದಹನುಮೇಗೌಡ* ಕೋಲಾರ- ಕೆ.ವಿ ಗೌತಮ್* ಚಿಕ್ಕಬಳ್ಳಾಪುರ- ರಕ್ಷಾ ರಾಮಯ್ಯ* ಹಾಸನ- ಎಂ ಶ್ರೇಯಸ್ ಪಟೇಲ್* ಮಂಡ್ಯ- ವೆಂಕಟರಮಣಗೌಡ ( ಸ್ಟಾರ್ ಚಂದ್ರು)* ದಕ್ಷಿಣ ಕನ್ನಡ - ಪದ್ಮರಾಜ್.ಆರ್* ಚಾಮರಾಜನಗರ- ಸುನೀಲ್ ಬೋಸ್