* ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಇಂದು ಮಧ್ಯಾಹ್ನ 3.20ಕ್ಕೆ ಒಡಿಶಾದ ಕರಾವಳಿಯಲ್ಲಿ ಕಡಿಮೆ ವ್ಯಾಪ್ತಿಯ ಮೇಲ್ಮೈಯಿಂದ ವಾಯು ಕ್ಷಿಪಣಿಯನ್ನು (SRSAM) ಯಶಸ್ವಿಯಾಗಿ ಪರೀಕ್ಷಿಸಿತು. * ಲಂಬ ಉಡ್ಡಯನದ - ಕಡಿಮೆ ವ್ಯಾಪ್ತಿಯ, ನೆಲದಿಂದ ಆಗಸದ ಗುರಿಗೆ ದಾಳಿ ನಡೆಸುವ (ವಿಎಲ್-ಎಸ್‌ಆರ್‌ಎಸ್‌ಎಎಂ) ಕ್ಷಿಪಣಿಯ ಪರೀಕ್ಷೆಯು ಸೆಪ್ಟೆಂಬರ್ 13 ರಂದು (ಶುಕ್ರವಾರ) ಯಶಸ್ವಿಯಾಗಿ ನಡೆದಿದೆ. * ಒಡಿಶಾ ಕರಾವಳಿಯ ಚಂಡೀಪುರದಲ್ಲಿನ ಪರೀಕ್ಷಾ ಕೇಂದ್ರದಲ್ಲಿ ಈ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಸೆಪ್ಟೆಂಬರ್ 12 ರಂದು (ಗುರುವಾರ) ನಡೆದಿತ್ತು.* ನೌಕಾ ಯುದ್ಧನೌಕೆಗಳಲ್ಲಿ ಇದನ್ನು ಲಂಬ ಉಡಾವಣಾ ವ್ಯವಸ್ಥೆಯಲ್ಲಿ ಸ್ಥಾಪಿಸಲಾಗಿದೆ. ಆದ್ದರಿಂದ ಇದನ್ನು ವರ್ಟಿಕಲ್ ಲಾಂಚ್ ಶಾರ್ಟ್ ರೇಂಜ್ ಸರ್ಫೇಸ್ ಟು ಏರ್ ಮಿಸೈಲ್ (VR-SRSAM) ಎಂದೂ ಕರೆಯುತ್ತಾರೆ. ಆದರೆ ಇದನ್ನು ನೆಲದಿಂದಲೂ ಉಡಾಯಿಸಬಹುದು.* ಈ ಕ್ಷಿಪಣಿಯ ತೂಕ 170 ಕೆ.ಜಿ. 12.9 ಅಡಿ ಉದ್ದದ ಕ್ಷಿಪಣಿಯ ವ್ಯಾಸ 7 ಇಂಚು. ಅದರಲ್ಲಿ ಅಳವಡಿಸಲಾಗಿರುವ ರೆಕ್ಕೆಗಳ ವಿಸ್ತಾರ 20 ಇಂಚು. ಈ ಕ್ಷಿಪಣಿಯಲ್ಲಿ ಹೈ-ಸ್ಫೋಟಕ ಪೂರ್ವ-ವಿಘಟನೆಯ ಸಿಡಿತಲೆ ಅಳವಡಿಸಲಾಗಿದೆ. ಘನ ಇಂಧನ ರಾಕೆಟ್ ಎಂಜಿನ್ ಸಹಾಯದಿಂದ ಹಾರುವ ಈ ಕ್ಷಿಪಣಿಯು 80 ಕಿಲೋಮೀಟರ್ ವ್ಯಾಪ್ತಿಗೆ ಅಪ್ಪಳಿಸಬಲ್ಲದು.* ಈ ಕ್ಷಿಪಣಿಯು ಗರಿಷ್ಠ 52 ಸಾವಿರ ಅಡಿ ಎತ್ತರವನ್ನು ತಲುಪಬಲ್ಲದು. ಇದರ ಗರಿಷ್ಠ ವೇಗ 4.5 ಮ್ಯಾಕ್. ಅಂದರೆ ಗಂಟೆಗೆ 5556.6 ಕಿಲೋಮೀಟರ್. ಅಂದರೆ ಶತ್ರುಗಳಿಗೆ ತಪ್ಪಿಸಿಕೊಳ್ಳಲು ಸಮಯ ಸಿಗುವುದಿಲ್ಲ. ಈ ಕ್ಷಿಪಣಿಯ ವಿಶೇಷತೆ ಎಂದರೆ ಅದು 360 ಡಿಗ್ರಿ ಸುತ್ತಿ ತನ್ನ ಶತ್ರುವನ್ನು ನಾಶಪಡಿಸುತ್ತದೆ.