* ಕಳೆದ ಎರಡು ದಶಕದಿಂದ ಟೀಮ್ ಇಂಡಿಯಾದ ಅದೆಷ್ಟೋ ಸ್ಮರಣೀಯ ಇನಿಂಗ್ಸ್ಗಳಲ್ಲಿ ಭಾಗವಹಿಸಿದ್ದ, ಅನುಭವಿ ಫಾರ್ವರ್ಡ್ ಆಟಗಾ ಲಲಿತ್ ಉಪಾದ್ಯ ಸೋಮವಾರ ತಮ್ಮ ಹಾಕಿ ವೃತ್ತಿ ಜೀವನಕ್ಕೆ ವಿದಾಯ ಹೇಳದ್ದಾರೆ.* ಇವರು ಟೀಮ್ ಇಂಡಿಯಾ ಟೋಕಿಯೋದಲ್ಲಿ ನಡೆದಿದ್ದ ಒಲಿಂಪಿಕ್ಸ್ ಹಾಗೂ ಪ್ಯಾರೀಸ್ನಲ್ಲಿ ನಡೆದಿದ್ದ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದ ಭಾರತ ತಂಡದ ಸದಸ್ಯರಾಗಿದ್ದಾರೆ.* ಇವರು 2014ರಲ್ಲಿ ವಿಶ್ವಕಪ್ನಲ್ಲಿ ಮೈದಾನಕ್ಕೆ ಇಳಿಯುವ ಮೂಲಕ ಅಂತಾರಾಷ್ಟ್ರೀಯ ಹಾಕಿ ಪಂದ್ಯವನ್ನು ಆಡಿದರು. ಲಲಿತ್ ಸಾಮಾಜಿಕ ತಾಣದ ಮೂಲಕ ವಿದಾಯವನ್ನು ಘೋಷಿಸಿದ್ದಾರೆ.* ಟೀಮ್ ಇಂಡಿಯಾದ ಪರ 33 ವರ್ಷದ ಲಲಿತ್ ಉಪಾಧ್ಯಾಯ ಹಲವು ಸ್ಮರಣೀಯ ಪಂದ್ಯಗಳನ್ನು ಆಡಿದ್ದಾರೆ. ಇವರ ಅಮೋಘ ಆಟದ ಪರಿಣಾಮ ಅದೆಷ್ಟೋ ಪಂದ್ಯಗಳಲ್ಲಿ ಭಾರತ ಗೆಲುವು ದಾಖಲಿಸುವಲ್ಲಿ ಇವರ ಕೊಡುಗೆ ಅಪಾರ.* ಸಿಕ್ಕ ಅವಕಾಶವನ್ನು ಬಳಸಿಕೊಂಡು ಎದುರಾಳಿ ಗೋಲ್ ಕೀಪರ್ ವಂಚಿಸಿ, ಚೆಂಡನ್ನು ಗೋಲು ಪೆಟ್ಟಿಗೆಯಲ್ಲಿ ದೂಡುವಲ್ಲಿ ಇವರು ಸಫಲರಾಗಿದ್ದರು. ಇವರು ಭಾರತದ ಪರ 183 ಪಂದ್ಯಗಳನ್ನು ಆಡಿದ್ದು, 67 ಗೋಲು ಸಿಡಿಸಿದ್ದಾರೆ. ಇವರು ಭಾರತದ ಪರ ಜೂನ್ 15 ರಂದು ಆಸ್ಟ್ರೇಲಿಯಾ ವಿರುದ್ಧ ಕೊನೆಯ ಪಂದ್ಯವನ್ನು ಆಡಿದ್ದಾರೆ.* ಭಾರತ ತಂಡಕ್ಕೆ ಇವರು ನೀಡಿದ ಅಮೋಘ ಕೊಡುಗೆಯನ್ನು ಪರಿಗಣಿಸಿರುವ ಕೇಂದ್ರ ಸರ್ಕಾರ 2021ರಲ್ಲಿ ಅರ್ಜುನ್ ಪ್ರಶಸ್ತಿಯನ್ನು ನೀಡಿ ಗೌರವಿಸಿತು.* ಲಲಿತ್ 2022ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಬೆಳ್ಳಿ ಪದಕ, ಏಷ್ಯನ್ ಗೇಮ್ಸ್ನಲ್ಲಿ 2022ರಲ್ಲಿ ಬಂಗಾರ, 2018ರಲ್ಲಿ ಕಂಚು, ವಿಶ್ವ ಲೀಗ್ 2016-17ರಲ್ಲಿ ಕಂಚು, ಏಷ್ಯಾ ಕಪ್ 2017ರಲ್ಲಿ ಬಂಗಾರ ಗೆದ್ದ ತಂಡದ ಭಾಗವಾಗಿದ್ದರು.