Job Description: * ಉತ್ತರಾಖಂಡದ ಪ್ರಸಿದ್ಧ ಯಾತ್ರಾಧಾಮವಾದ ರಿಷಿಕೇಶದಲ್ಲಿ ಬಜರಂಗ ಸೇತು ಎಂಬ ಹೊಸ ಗಾಜಿನ ನೆಲದ (Glass–Floor) ಸೇತುವೆಯನ್ನು ನಿರ್ಮಿಸಲಾಗಿದೆ. ಇದು ಪ್ರವಾಸಿಗರು ಹಾಗೂ ಯಾತ್ರಿಕರಿಗೆ ಹೊಸ ಆಕರ್ಷಣೆಯಾಗಿ ಪರಿಣಮಿಸಿದೆ.* ವರ್ಷಗಳ ಕಾಲ ಪ್ರವಾಸಿಗರ ಪ್ರಮುಖ ಆಕರ್ಷಣೆ ಆಗಿದ್ದ ಲಕ್ಷ್ಮಣ ಝೂಲಾ ಸೇತುವೆ ಪ್ರಾಯೋಜ್ಯ, ಜಂಗು ಹಾಗೂ ಸುರಕ್ಷತಾ ಕಾರಣಗಳಿಂದ ಹಾನಿಗೊಳಗಾಗಿತ್ತು. ಸಂಚಾರಕ್ಕೆ ಅನನೂಕುಲ ಹಾಗೂ ಅಪಾಯದ ಸಾಧ್ಯತೆ ಹೆಚ್ಚಾಗಿದ್ದ ಕಾರಣ ಹೊಸ ಪರ್ಯಾಯವಾಗಿ ಬಜರಂಗ ಸೇತು ನಿರ್ಮಿಸಲು ಸರ್ಕಾರ ಕ್ರಮ ಕೈಗೊಂಡಿತು.*ಬಜರಂಗ ಸೇತು ಇದು ಪಾದಚಾರಿಗಳಿಗಾಗಿ ಮಾತ್ರ (Pedestrian Bridge) ನಿರ್ಮಿಸಲಾದ ಸೇತುವೆ ಆಗಿದೆ.* ಗಂಗಾನದಿಯ ಮೇಲಿಂದ ನಡೆಯುವ ಅನುಭವವನ್ನು ಗಾಜಿನ ನೆಲದ ಮೂಲಕ ಸ್ಪಷ್ಟವಾಗಿ ನೋಡಬಹುದಾಗಿದೆ, ಇದು ವಿಶೇಷ ಆಕರ್ಷಣೆ. * ಮಲ್ಟಿ-ಲೇಯರ್ ಟೆಂಪರ್ಡ್ ಗ್ಲಾಸ್ ಬಳಸಿ ನೆಲವನ್ನು ನಿರ್ಮಿಸಿರುವುದು ಪ್ರಮುಖ ತಾಂತ್ರಿಕ ವೈಶಿಷ್ಟ್ಯ ಇದು ಮೂರು ಪದರಗಳ ಗಟ್ಟಿ ಗಾಜು ಹೊಂದಿರುವುದರಿಂದ ಹೆಚ್ಚು ತೂಕ ಸಹಿಸುವ ಸಾಮರ್ಥ್ಯ ಹೊಂದಿದೆ. * ಜೊತೆಗೆ ಪಾದಚಾರಿ ಸುರಕ್ಷತೆ,ಬಿರುಕು ತಡೆಗಟ್ಟುವ ಗುಣ ಸೇತುವೆಯ ಶಕ್ತಿ ಪರೀಕ್ಷೆಗಳನ್ನು ವಿಜ್ಞಾನಿಕವಾಗಿ ನಡೆಸಲಾಗಿದ್ದು, ನಿರಂತರ ನಿಗಾವಯವಸ್ಥೆ ಕೂಡ ಅಳವಡಿಸಲಾಗಿದೆ.* ಸೇತುವೆಯ ಉದ್ದ ಸುಮಾರು 125 ಮೀಟರ್,ಎತ್ತರ 57 ಮೀಟರ್ ಗಂಗಾ ನದಿಯಿಂದ ಹಾಗೂ ಗಾಜಿನ ದಪ್ಪ40 ಮಿಮೀ (ಮೂರು ಪದರಗಳು) ಆಗಿದೆ.ಮತ್ತು ಸೇತುವೆಯ ಮೇಲೆ ಒಂದೇ ಸಮಯದಲ್ಲಿ 700 ಜನರು ಓಡಾಡುವ ಸಾಮರ್ಥ್ಯ ವನ್ನು ಹೊಂದಿದೆ. * ಸೇತುವೆಯು ಸ್ಥಳೀಯ ವ್ಯಾಪಾರಿಗಳಿಗೆ ಹೋಟೆಲ್,ರೆಸ್ಟೋರೆಂಟ್,ಕೈಗಾರಿಕಾ ಕೈಪಾಡಿ ವಸ್ತುಗಳ ಮಾರಾಟ ಪ್ರವಾಸೋದ್ಯಮದ ಆದಾಯ ಗಣನೀಯವಾಗಿ ಏರಿಕೆ ಸ್ಥಳೀಯ ಉದ್ಯೋಗಾವಕಾಶಗಳಿಗೆ ಉತ್ತೇಜನ ನೀಡುವಮೂಲಕ ಆರ್ಥಿಕ ವೃದ್ಧಿಗೆ ಕಾರಣವಾಗಲಿದೆ.* ಬಜರಂಗ ಸೇತು ಆಧುನಿಕ ತಂತ್ರಜ್ಞಾನ, ಪ್ರವಾಸೋದ್ಯಮದ ಉತ್ತೇಜನ ಮತ್ತು ಧಾರ್ಮಿಕ–ಸಾಹಸ ಅನುಭವಕ್ಕೆ ಹೊಸ ವೇದಿಕೆ ಆಗಿದೆ.