* ಉದ್ಯೋಗ ಹುಡುಕಾಟ ತಾಣ ಲಿಂಕ್ಸ್ಇನ್ ವಾರ್ಷಿಕ ಟಾಪ್ ಕಂಪನಿಗಳ ಪಟ್ಟಿಯ ಒಂಬತ್ತನೇ ಆವೃತ್ತಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಈ ಪಟ್ಟಿಯು ಸಂಪೂರ್ಣವಾಗಿ ಲಿಂಕ್ಸ್ ಇನ್ ಡೇಟಾವನ್ನು ಆಧರಿಸಿದ್ದು ಉದ್ಯೋಗಿಗಳು ಹೇಗೆ ಅಭಿವೃದ್ಧಿ ಹೊಂದುತ್ತಿದ್ದಾರೆ, ಹೇಗೆ ಹೊಸ ಕೌಶಲಗಳನ್ನು ಕಲಿಯುತ್ತಿದ್ದಾರೆ ಮತ್ತು ಸಂಸ್ಥೆಯ ಪ್ರಗತಿಗೆ ಹೇಗೆ ಶ್ರಮಿಸುತ್ತಿದ್ದಾರೆ ಎಂಬ ಮಾನ ದಂಡಗಳ ಮೇಲೆ ಕಂಪನಿಗಳಿಗೆ ಸ್ಥಾನ ನೀಡಲಾಗಿದೆ.* ಇತ್ತೀಚೆಗೆಷ್ಟೇ ಬಿಡುಗಡೆಯಾದ ಪಟ್ಟಿಯಲ್ಲಿ ಗೂಗಲ್ ಮಾತೃ ಕಂಪನಿ ಅಲ್ಪಬೆಟ್ ಅಗ್ರ ಸ್ಥಾನ ಪಡೆದುಕೊಂಡಿದೆ. ನಂತರ ಅಮೆಜಾನ್ ಎರಡನೇ ಸ್ಥಾನದಲ್ಲಿದೆ. ಹಣಕಾಸು ಕ್ಷೇತ್ರದ ಅನಿಶ್ಚಿತತೆಗಳ ಹೊರತಾಗಿಯೂ, ವೆಲ್ಸ್ ಫಾರ್ಗೋ, ಕ್ಯಾಪಿಟಲ್ ಒನ್ ಮತ್ತು ಜೆಪಿ ಮೋರ್ಗಾನ್ ಚೇಸ್ ಕೂಡ ಟಾಪ್ 10ರಲ್ಲಿವೆ ಎಂದು ಲಿಂಕ್ಸ್ಇನ್ ಸಂಪಾದಕ ಆಂಡೂ ಸೀಮನ್ ಹೇಳಿದ್ದಾರೆ.* ಟಾಪ್ 10 ಕಂಪನಿಗಳಲ್ಲಿ ಆರು ಕಂಪನಿಗಳು ಕಳೆದ ವರ್ಷದ ಸ್ಥಾನವನ್ನೇ ಉಳಿಸಿಕೊಂಡಿವೆ. ಇದರ ಜೊತೆಗೆ ಹೊಸ ಕಂಪನಿಗಳ ಹೆಸರುಗಳೂ ಸ್ಥಾನ ಪಡೆದುಕೊಂಡಿವೆ. ಕಳೆದ ವರ್ಷ ವಾಲ್ಮಾರ್ಟ್ ಲಿಂಕ್ಸ್ಇನ್ ಪಟ್ಟಿಯಲ್ಲಿ ಸೇರ್ಪಡೆಯಾಗಿರಲಿಲ್ಲ. ಆದರೆ ಈ ವರ್ಷದ ಟಾಪ್ ಹತ್ತು ಕಂಪನಿಗಳ ಪೈಕಿ ವಾಲ್ಮಾರ್ಟ್ ಸ್ಥಾನ ಪಡೆದುಕೊಂಡಿದೆ ಎಂದು ಸೀಮನ್ ಹೇಳಿದ್ದಾರೆ.* 2025ರ ಟಾಪ್ ಇಪ್ಪತ್ತು ಕಂಪನಿಗಳು : ಅಲ್ಪಬೆಟ್(ಗೂಗಲ್), ಅಮೆಜಾನ್, ವೆಲ್ಸ್ ಫಾರ್ಗೋ, ನಾಥೋಪ್ ಗ್ರಮ್ಮ, ಪಿಡಬ್ಲ್ಯೂಸಿ, ಕ್ಯಾಪಿಟಲ್ ಒನ್, ಎಲ್ ಆ್ಯಂಡ್ ಟಿ, ಜೆಪಿ ಮೊರ್ಗಾನ್ ಚೇಸ್, ಇವೈ, ವಾಲ್ಮಾರ್ಟ್, ಬ್ಯಾಂಕ್ ಆಫ್ ಅಮೆರಿಕ, ಯುನೈಟೆಡ್ ಹೆಲ್ತ್ ಗ್ರೂಪ್, ವೆರಿನ್, ಒರಾಕಲ್, ಸಿವಿಎಸ್ ಹೆಲ್ತ್, ಜನರಲ್ ಮೋಟಾರ್ಸ್, ಪ್ರಾಕ್ಟರ್ ಆ್ಯಂಡ್ ಗ್ಯಾಂಬಲ್ ನ್ಯಾನೋ ಟೆಕ್ನಾಲಜಿ, ಝಡ್ಎಫ್ ಗ್ರೂಪ್, ಅಕ್ಸೆಂಚರ್ ಮತ್ತು ಇನ್ಫೋಸಿಸ್.