* ಲಿಂಗತ್ವ ಸಂವೇದನೆ ಮತ್ತು ಆಂತರಿಕ ದೂರುಗಳ ಸಮಿತಿಯನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ಅವರು ಪುನರ್‌ರಚಿಸಿದ್ದಾರೆ.* 12 ಜನ ಸದಸ್ಯರ ಈ ಸಮಿತಿಗೆ ನ್ಯಾಯಮೂರ್ತಿ ಹಿಮಾ ಕೊಹ್ಲಿ ಅಧ್ಯಕ್ಷರಾಗಿರುತ್ತಾರೆ. ನ್ಯಾಯಮೂರ್ತಿ ಬಿ.ವಿ. ನಾಗರತ್ನ ಹೆಚ್ಚುವರಿ ರಿಜಿಸ್ಟ್ರಾ‌ರ್ ಸುಖದಾ ಪ್ರೀತಂ, ಹಿರಿಯ ವಕೀಲರಾದ ಮೀನಾಕ್ಷಿ ಅರೋರ, ಮಹಾಲಕ್ಷ್ಮಿ ಪಾವನಿ ಅವರು 55 ಪುನರ್ ರಚನೆ ಆಗಿರುವ ಸಮಿತಿಯಲ್ಲಿ ಇದ್ದಾರೆ.* ಸುಪ್ರೀಂ ಕೋರ್ಟ್ ವಕೀಲರ ಸಂಘದ ಪ್ರತಿನಿಧಿ ಸೌಮ್ಯಜಿತ್ ಪಾಣಿ, ಅಡ್ವಕೇಟ್ ಆನ್ ರೆಕಾರ್ಡ್ ಅನಿಂದಿತಾ ಪೂಜಾರಿ, ಅ. ವಕೀಲೆ ಮಧು ಚೌಹಾಣ್, ಪ್ರೊಫೆಸರ್ ಶ್ರುತಿ ಪಾಂಡೆ, ಹಿರಿಯ ವಕೀಲರಾದ ಜೈದೀಪ್ ಗುಪ್ತಾ, ಮೇನಕಾ ಗುರುಸ್ವಾಮಿ 2ನೇ ಮತ್ತು, ಷಿಕಾಗೊ ವಿಶ್ವವಿದ್ಯಾಲಯದ ದೆಹಲಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕಿ ಲೇನಿ ಚೌಧುರಿ ಅವರು ಸಮಿತಿಯಲ್ಲಿದ್ದಾರೆ.