* ಜಾಗತಿಕ ಲಿಂಗತ್ವ ಸಮಾನತೆಗೆ ಸಂಬಂಧಿಸಿ ಪ್ರಸಕ್ತ ಸಾಲಿನಲ್ಲಿ ಭಾರತದ ಸ್ಥಾನದಲ್ಲಿ ಸುಧಾರಣೆ ಕಂಡುಬಂದಿದ್ದು, 146 ದೇಶಗಳ ಪೈಕಿ ಭಾರತವು 127ನೇ ಸ್ಥಾನದಲ್ಲಿದೆ.* ಲಿಂಗತ್ವ ಅಸಮಾನತೆ ಸೂಚ್ಯಂಕ ವರದಿ-2023ರ ಪ್ರಕಾರ ಕಳೆದ ವರ್ಷ ಭಾರತ 135ನೇ ಸ್ಥಾನದಲ್ಲಿದ್ದು, ಎಂಟು ಸ್ಥಾನಗಳಷ್ಟು ಸುಧಾರಣೆ ಕಂಡುಬಂದಿದೆ ಎಂದು ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯುಇಎಫ್‌) ಬಿಡುಗಡೆ ಮಾಡಿರುವ ವಾರ್ಷಿಕ ಲಿಂಗತ್ವ ಅಸಮಾನತೆಯ ಸೂಚ್ಯಂಕವನ್ನು ತಿಳಿಸಲಾಗಿದೆ.* ಲಿಂಗತ್ವ ಸಮಾನತೆಯಲ್ಲಿ ಪಾಕಿಸ್ತಾನದ ಸ್ಥಾನ 142, ಬಾಂಗ್ಲಾದೇಶ-59, ಚೀನಾ- 107, ನೇಪಾಳ-116, ಶ್ರೀಲಂಕಾ-115 ಹಾಗೂ ಭೂತಾನ್‌ 103ನೇ ಸ್ಥಾನದಲ್ಲಿವೆ.