* ಫ್ರಾನ್ಸ್ನ ಲೆಯಾನ್ ಮರ್ಷಾನ್ ಅವರು ಪುರುಷರ 200 ಮೀಟರ್ ಮೆಡ್ಲೆ ಫೈನಲ್ನಲ್ಲಿ 1:53.68 ಸೆಕೆಂಡಿನಲ್ಲಿ ಮುನ್ನುಗ್ಗಿ ಚಿನ್ನ ಗೆದ್ದರು. ಸೆಮಿಫೈನಲ್ನಲ್ಲಿ 1:52.69 ಸಮಯದಲ್ಲಿ ವಿಶ್ವದಾಖಲೆ ಬರೆದಿದ್ದರು. ಈಗಾಗಲೇ ಅವರ ಖಾತೆಯಲ್ಲಿ 6 ಚಿನ್ನಗಳಾಗಿವೆ.* ಕೆನಡಾದ 18 ವರ್ಷದ ಮೆಕಿಂಟೋಷ್ ಅವರು ಮಹಿಳೆಯರ 200 ಮೀ. ಬಟರ್ಫ್ಲೈನಲ್ಲಿ 2:01.99 ಸಮಯದಲ್ಲಿ ಚಿನ್ನ ಗೆದ್ದು ಹ್ಯಾಟ್ರಿಕ್ ಸಾಧಿಸಿದರು.* ಈಗೂ ಅವರು 400 ಮೀ. ಮತ್ತು 200 ಮೀ. ಮೆಡ್ಲೆ ವಿಭಾಗದಲ್ಲಿ ಚಿನ್ನ ಜಯಿಸಿದ್ದರು. ಮೈಕೆಲ್ ಫೆಲ್ಪ್ಸ್ಅವರ ದಾಖಲೆ ಬಳಿಯತ್ತ ಸಾಗುತ್ತಿದ್ದಾರೆ.* ರುಮೇನಿಯಾದ ಡೇವಿಡ್ ಪೊಪೊವಿಸಿ ಅವರು 100 ಮೀ. ಫ್ರೀಸ್ಟೈಲ್ನಲ್ಲಿ 46.51 ಸೆಕೆಂಡಿನಲ್ಲಿ ಚಿನ್ನ ಗೆದ್ದು ಎರಡನೇ ಚಾಂಪಿಯನ್ ಪಟ್ಟವನ್ನು ತಮ್ಮದಾಗಿಸಿಕೊಂಡರು.* ಪುರುಷರ 200 ಮೀ. ಮೆಡ್ಲೆ: ಅಮೆರಿಕದ ಶೈನ್ ಕಾಸಸ್ ಬೆಳ್ಳಿ, ಹಂಗೇರಿಯ ಹ್ಯೂಬರ್ಟ್ ಕೋಸ್ ಕಂಚು.* ಮಹಿಳೆಯರ 200 ಮೀ. ಬಟರ್ಫ್ಲೈ: ರೇಗನ್ ಸ್ಮಿತ್ (ಅಮೆರಿಕ) ಬೆಳ್ಳಿ, ಎಲಿಜಬೆತ್ ಡೆಕ್ಕರ್ಸ್ (ಆಸ್ಟ್ರೇಲಿಯಾ) ಕಂಚು. 50 ಮೀ. ಬ್ಯಾಕ್ಸ್ಟ್ರೋಕ್: ಅಮೆರಿಕದ ಕ್ಯಾಥರೀನ್ ಬರ್ಕಾಫ್ ಚಾಂಪಿಯನ್.