* ಹೈದರಾಬಾದ್ನ ಸ್ಟಾರ್ಟ್ಅಪ್ ಕಂಪನಿಯಾಗಿರುವ ಸಿಂಪ್ಲಿಫೋರ್ಜ್ ಕ್ರಿಯೇಷನ್ಸ್, ಐಐಟಿ ಹೈದರಾಬಾದ್ನ ಜೊತೆಯೊಂದಿಗೆ ವಿಶ್ವದ ಪ್ರಥಮ 3ಡಿ ಮುದ್ರಿತ ಸೇನಾ ಬಂಕರ್ ಅನ್ನು ಅಭಿವೃದ್ಧಿಪಡಿಸಿದೆ.* ಲೇಹ್ನಲ್ಲಿ ಈ ಬಂಕರ್ ನಿರ್ಮಾಣವಾಗಿದ್ದು, ಇದನ್ನು ಐಐಟಿ ಹೈದರಾಬಾದ್ನ ಪ್ರಾಧ್ಯಾಪಕ ಕೆ. ವಿ. ಎಲ್. ಸುಬ್ರಮಣಿಯಂ ಅವರ ಮಾರ್ಗದರ್ಶನದಲ್ಲಿ ರೂಪಿಸಲಾಗಿದೆ.* ಲಡಾಖ್ ಪ್ರದೇಶದಲ್ಲಿ ಚೀನಾದ ಗಡಿಯ ಬಳಿ ಕಾರ್ಯನಿರ್ವಹಿಸುತ್ತಿರುವ ಸೈನಿಕರ ಸುರಕ್ಷತೆಗಾಗಿ ಈ ನವೀನ ಬಂಕರ್ ನಿರ್ಮಿಸಲಾಗಿದ್ದುದು.* 3ಡಿ ಮುದ್ರಿತ ಬಂಕರ್ಗಳು ತೀವ್ರ ಬಲಿಷ್ಠವಾಗಿದ್ದು, ಕಡಿಮೆ ತೂಕ ಮತ್ತು ಹೆಚ್ಚಿನ ಬಾಳಿಕೆ ಹೊಂದಿರುವುದರಿಂದ ಟಿ-90 ಟ್ಯಾಂಕ್ನ ದಾಳಿಯನ್ನೂ ಸಹ ತಡೆಯುವ ಸಾಮರ್ಥ್ಯ ಹೊಂದಿವೆ.* ಸೈನ್ಯಕ್ಕೆ ಬೇಕಾದ ರೂಪದಲ್ಲಿ ಮತ್ತು ಅಗತ್ಯಕ್ಕೆ ತಕ್ಕಂತೆ ಇವುಗಳನ್ನು ತುಂಬಾ ಚುರುಕುಗವಾಗಿ ತಯಾರಿಸಬಹುದಾಗಿದೆ.