* ಲಡಾಖ್ನಲ್ಲಿ 477 ಹಿಮ ಚಿರತೆಗಳು ಇರುವುದರಿಂದ ಇದು ವಿಶ್ವದ ಅತಿದೊಡ್ಡ ಹಿಮ ಚಿರತೆ ಸಾಂದ್ರತೆಗಳಲ್ಲೊಂದಾಗಿದೆ.* ಭಾರತವು ಒಟ್ಟು 709 ಹಿಮಚಿರತೆಗಾಳ ಪೈಕಿ ಈ ಪ್ರದೇಶವು 68% ಅನ್ನು ಹೊಂದಿದೆ.* 59,000 ಚದರ ಕಿ.ಮೀ. ಪ್ರದೇಶವನ್ನು ಅಧ್ಯಯನ ನಡೆಸಿದಾಗ, 47,500 ಚದರ ಕಿ.ಮೀ. ಪ್ರದೇಶದಲ್ಲಿ ಹಿಮ ಚಿರತೆಗಳು ವಾಸಿಸುತ್ತಿರುವುದು ಕಂಡುಬಂದಿದೆ.* ಈ ಪ್ರಾಣಿಗಳು ಪ್ಯಾಂಥೆರಾ ಕುಲಕ್ಕೆ ಸೇರಿದ್ದು, ಭಾರತದ ಜೊತೆಗೆ ಚೀನಾ, ನೇಪಾಳ, ಪಾಕಿಸ್ತಾನದ ಪರ್ವತ ಪ್ರದೇಶಗಳಲ್ಲಿ ಕಂಡುಬರುತ್ತವೆ.* ಲಡಾಖ್ನ ಸಮುದಾಯಗಳಲ್ಲಿ ವನ್ಯಜೀವಿಗಳಿಗೆ ಇರುವ ಗೌರವ, ಪ್ರವಾಸೋದ್ಯಮ ಮತ್ತು ಸಂಘರ್ಷ ನಿರ್ವಹಣಾ ತಂತ್ರಗಳು ಇವುಗಳ ಉಳಿವಿಗೆ ಸಹಕಾರಿಯಾಗಿವೆ.* ಸುಮಾರು 60% ಹಿಮ ಚಿರತೆಗಳು ಮಾನವರೊಂದಿಗೆ ಸಹಬಾಳ್ವೆ ನಡೆಸುತ್ತಿವೆ.* 900 ಕ್ಯಾಮೆರಾ ಬಲೆಗಳ ಮೂಲಕ ಚಿರತೆಗಳನ್ನು ಗುರುತಿಸಲಾಯಿತು; ಅವುಗಳ ಹಣೆಯ ಗುರುತುಗಳು ಪ್ರತ್ಯೇಕ ಪತ್ತೆಗೆ ನೆರವಾಯಿತು.* ಹೆಮಿಸ್ ಉದ್ಯಾನವನ, ಕಾರ್ಗಿಲ್ ಮತ್ತು ಲೇಹ್ಗಳಲ್ಲಿ ಅತ್ಯಧಿಕ ಸಾಂದ್ರತೆ ದಾಖಲಾಗಿದೆ.* ಈ ಅಧ್ಯಯನವು ಹಿಮ ಚಿರತೆಗಳ ಛಾಯಾಚಿತ್ರ ಗ್ರಂಥಾಲಯವನ್ನೂ ರೂಪಿಸಿದೆ, ಇದು ಕಳ್ಳಬೇಟೆ ಮತ್ತು ಕಳ್ಳ ಸಾಗಣೆಗೆ ವಿರುದ್ಧದ ಮೇಲ್ವಿಚಾರಣೆಗೆ ಸಹಾಯ ಮಾಡುತ್ತದೆ.