Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಕ್ಯಾನ್ಸರ್ ಮುಕ್ತ ಭವಿಷ್ಯಕ್ಕಾಗಿ: ಗರ್ಭಕಂಠದ ಕ್ಯಾನ್ಸರ್ ನಿರ್ಮೂಲನಾ ದಿನದ ಮಹತ್ವ
18 ನವೆಂಬರ್ 2025
*
2024–2025ರಿಂದ ವಿಶ್ವ ಆರೋಗ್ಯ ಸಂಸ್ಥೆ (WHO) ಗರ್ಭಾಶಯದ ಬಾಯಿಯ ಕ್ಯಾನ್ಸರ್ (Cervical Cancer) ಅನ್ನು
ಜಾಗತಿಕ ಮಟ್ಟದಲ್ಲಿ ನಿರ್ಮೂಲನೆ ಮಾಡಲು ದೊಡ್ಡ ಮಟ್ಟದ ಅಭಿಯಾನ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ,
ವಿಶ್ವವು ಮೊದಲ ಬಾರಿಗೆ "Cervical Cancer Elimination Day" ಅನ್ನುNovember 18,2024ರಂದು “First Global Cervical Cancer Elimination Day” ಆಚರಿಸಿದೆ.
ಇದು ಮಹಿಳೆಯರ ಆರೋಗ್ಯ ರಕ್ಷಣೆಯ ದಿಶೆಯಲ್ಲಿ ಐತಿಹಾಸಿಕ ಹೆಜ್ಜೆ ಎಂದು ಪರಿಗಣಿಸಲಾಗಿದೆ.
* ಗರ್ಭಾಶಯದ ಬಾಯಿಯಲ್ಲಿ ಉಂಟಾಗುವ ಕ್ಯಾನ್ಸರ್ ಅನ್ನು
Cervical Cancer ಎನ್ನುತ್ತಾರೆ
.ಇದು ಮುಖ್ಯವಾಗಿ
HPV (Human Papillomavirus)
ಎಂಬ ವೈರಸ್ನಿಂದ ಉಂಟಾಗುತ್ತದೆ.ಸಮಯಕ್ಕೆ ಸರಿಯಾದ ಪರೀಕ್ಷೆ ಮತ್ತು ಲಸಿಕೆ ಇದ್ದರೆ ಇದು ಹತ್ತಿರಕ್ಕೆ
ಶೇಕಡಾ 90%
ತಡೆಯಬಹುದಾದ ಕ್ಯಾನ್ಸರ್!
* ಗರ್ಭಾಶಯದ ಕ್ಯಾನ್ಸರ್ ಭಾರತದಲ್ಲಿ ಮಹಿಳೆಯರಲ್ಲಿ ಸಾಮಾನ್ಯವಾಗಿರುವ
ಎರಡನೇ ಅತಿ ಹೆಚ್ಚು ಕ್ಯಾನ್ಸರ್.
ಜಗತ್ತಿನಲ್ಲಿ ಪ್ರತಿ ಎರಡು ನಿಮಿಷಕ್ಕೊಮ್ಮೆ ಒಬ್ಬ ಮಹಿಳೆ ಗರ್ಭಾಶಯದ ಕ್ಯಾನ್ಸರ್ನಿಂದ ಸಾವನ್ನಪ್ಪುತ್ತಾರೆ ಎಂಬ ಅಂಕಿಅಂಶವು ಈ ರೋಗದ ತೀವ್ರತೆಯನ್ನು ತೋರಿಸುತ್ತದೆ.ಎಲ್ಲಕ್ಕಿಂತ ದುಃಖಕರ ವಿಷಯ—ಈ ರೋಗ ತಡೆಯಬಹುದಾದ ರೋಗ.
* Cervical Cancer Elimination Day: ಮುಖ್ಯ ಉದ್ದೇಶಗಳು:
- ಮಹಿಳೆಯರಲ್ಲಿ ಸಂಪೂರ್ಣ ಜಾಗೃತಿ ಮೂಡಿಸುವುದು
- HPV ಲಸಿಕೆ ಅಭಿಯಾನಕ್ಕೆ ಜಾಗತಿಕ ಬೆಂಬಲ ಸೇರಿಸುವುದು
- ಸ್ಕ್ರೀನಿಂಗ್ ಮತ್ತು ನಿಗಾದ ಪರೀಕ್ಷೆ ಸಾಮಾನ್ಯಗೊಳಿಸುವುದು
- ಕಡಿಮೆ ಆದಾಯದ ದೇಶಗಳಲ್ಲಿ ಉಚಿತ ಚಿಕಿತ್ಸಾ ವ್ಯವಸ್ಥೆ ವಿಸ್ತರಣೆ
- 2030ರೊಳಗೆ ಈ ಕ್ಯಾನ್ಸರ್ನ ಸಂಭವನೀಯತೆಯನ್ನು 40%–50% ಇಳಿಸುವುದು
- 2040–2050 ರೊಳಗೆ ಸಂಪೂರ್ಣ ನಿರ್ಮೂಲನೆ ಎಂಬ ದೂರದರ್ಶಿ ಗುರಿ.
*
ಭಾರತದಲ್ಲಿ ಪ್ರತಿವರ್ಷ:1.25 ಲಕ್ಷಕ್ಕೂ ಹೆಚ್ಚು ಮಹಿಳೆಯರು ಈ ರೋಗಕ್ಕೆ ಒಳಗಾಗುತ್ತಾರೆ
ಮತ್ತು
ಅಂದಾಜು 75,000 ಮಹಿಳೆಯರು ಸಾವನ್ನಪ್ಪುತ್ತಾರೆ
ಹಾಗೂ ಜಾಗೃತಿ ಕೊರತೆ, ಸ್ಕ್ರೀನಿಂಗ್ ಕಡಿಮೆ, ಲಸಿಕೆ ನೀಡುವ ಪ್ರಮಾಣ ಕಡಿಮೆ — ಪ್ರಮುಖ ಸವಾಲುಗಳು ಕಂಡುಬರುತ್ತವೆ.
* ಭಾರತೀಯ ಬೈಯೋಟೆಕ್ ಕಂಪನಿ ತಯಾರಿಸಿರುವ
Cervavac ಎಂಬ indigenous HPV vaccine
ಅನ್ನು ಸರ್ಕಾರ ಸಾಮಾನ್ಯಗೊಳಿಸಲು ಯೋಜಿಸಿದೆ.
15
ವರ್ಷದೊಳಗಿನ ಹುಡುಗಿಯರಿಗೆ
ಉಚಿತವಾಗಿ ಲಸಿಕೆ ನೀಡಲು ರಾಜ್ಯಗಳು ಯೋಜನೆ ರೂಪಿಸುತ್ತಿವೆ.
* ವಿಶ್ವದ ಮೊದಲ
Cervical Cancer Elimination Day
ಒಂದು ಜಾಗೃತಿ ದಿನ ಮಾತ್ರವಲ್ಲ —ಇದು ಮಹಿಳೆಯರ ಆರೋಗ್ಯ ರಕ್ಷಣೆಯ ಪರ ಜಗತ್ತು ಏಕಕಂಠವಾಗಿ ಮಾಡಿದ ಘೋಷಣೆ.HPV ಲಸಿಕೆ, ನಿಯಮಿತ ತಪಾಸಣೆ ಮತ್ತು ಸಮಯಕ್ಕೆ ಚಿಕಿತ್ಸೆ ಎಂಬ ಮೂರು ಅಂಶಗಳು ನಾಳೆಯ ವಿಶ್ವವನ್ನು ಗರ್ಭಾಶಯದ ಕ್ಯಾನ್ಸರ್ ಮುಕ್ತ ಜಗತ್ತಿನತ್ತ ಕೊಂಡೊಯ್ಯುತ್ತವೆ.
* ಮಹಿಳೆಯರ ಆರೋಗ್ಯವನ್ನು ರಕ್ಷಿಸುವುದು ಎಂದರೆ ಒಟ್ಟು ಮಾನವ ಸಂಸ್ಕೃತಿಯನ್ನು ರಕ್ಷಿಸುವುದು.ಈ ಕಾರಣಕ್ಕೆ
Cervical Cancer Elimination Day ಜಾಗತಿಕ ಇತಿಹಾಸದಲ್ಲಿ ಮಹತ್ವದ ದಿನವಾಗಿ ಉಳಿಯಲಿದೆ.
* ವಿಶ್ವದ ಹೆಚ್ಚಿನ ದೇಶಗಳು WHO ಗುರಿಗೆ ಬದ್ಧವಾಗಿರುವುದರಿಂದ,2030ರೊಳಗೆ ಜಾಗತಿಕ ಮಟ್ಟದಲ್ಲಿ ಗರ್ಭಾಶಯದ ಕ್ಯಾನ್ಸರ್ ಪ್ರಮಾಣ ಅರ್ಧಕ್ಕಿಂತ ಹೆಚ್ಚು ಇಳಿಯಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.2050ರೊಳಗೆ ಈ ರೋಗವನ್ನು ಸ್ಮಾಲ್ಪಾಕ್ಸ್ನಂತೆ ಮಾನವ ಇತಿಹಾಸದಿಂದ ಅಳಿಸಬಹುದಾಗಿದೆ.ಇದು ವೈದ್ಯಕೀಯ ವಿಜ್ಞಾನ, ಜಾಗೃತಿ ಮತ್ತು ಸರ್ಕಾರಗಳ ಒಗ್ಗಟ್ಟಿನ ಫಲ.
* WHO ಗರ್ಭಾಶಯದ ಕ್ಯಾನ್ಸರ್ ನಿರ್ಮೂಲನೆಗೆ ಕೆಳಗಿನ ಗುರಿಯನ್ನು ನಿಗದಿಪಡಿಸಿದೆ:
1️⃣ 90% — 15 ವರ್ಷದೊಳಗಿನ ಹುಡುಗಿಯರಿಗೆ HPV ಲಸಿಕೆ
2️⃣ 70% — 35 ಮತ್ತು 45 ವಯಸ್ಸಿನ ಮಹಿಳೆಯರಿಗೆ ತಪಾಸಣೆ
3️⃣ 90% — ಕ್ಯಾನ್ಸರ್ ಪತ್ತೆಯಾದ ಮಹಿಳೆಯರಿಗೆ ತಕ್ಷಣ ಚಿಕಿತ್ಸೆ
ಈ ಮೂರು ಗುರಿಗಳು ಸಾಧಿಸಿದರೆ ಗರ್ಭಾಶಯದ ಕ್ಯಾನ್ಸರ್ ಅನ್ನು ನಿರ್ಮೂಲನೆ ಮಾಡಬಹುದು ಎಂದು WHO ಅಭಿಪ್ರಾಯ.
Take Quiz
Loading...