*  ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿಯ ಆರನೇ ಸುತ್ತಿನಲ್ಲಿ ಗ್ರಾಂಡ್‌ಮಾಸ್ಟರ್‌ಗಳಾದ ಆರ್.ಪ್ರಜ್ಞಾನಂದ ಮತ್ತು ವಿದಿತ್ ಎಸ್.ಗುಜರಾತಿ ಅವರು ಅಮೋಘ ಜಯ ಗಳಿಸಿದ್ದಾರೆ. ಭಾರತದ ಇನ್ನೊಬ್ಬ ಆಟಗಾರ ಡಿ.ಗುಕೇಶ್ ಅವರು ಅಮೆರಿಕದ ಹಿಕಾರು ನಕಾಮುರಾ ಜೊತೆ ಡ್ರಾ ಸಾಧಿಸಿ ಜಂಟಿ ಅಗ್ರಸ್ಥಾನದಲ್ಲಿ ಮುಂ ದುವರಿದಿದ್ದಾರೆ.* ಪಜ್ಞಾನಂದ ಅವರು ಆರನೇ ಸುತ್ತಿನ ಪಂದ್ಯದಲ್ಲಿ ಅಜರ್‌ಬೈಜಾನ್‌ನ ನಿಜತ್ ಅಬಸೋವ್ ಅವರನ್ನು 45 ನಡೆಗಳಲ್ಲಿ ಸೋಲಿಸಿದರು. ವಿದಿತ್ ಎಸ್.ಗುಜರಾತಿ ಅವರು ಫ್ರಾನ್ಸ್‌ನ ಇನ್ನೊಂದು ಅಲಿರೇಝಾ ಫಿರೋಜ್ ಅವರನ್ನು 40 ನಡೆಗಳಲ್ಲಿ ಸೋಲಿಸಿದರು.* ಕರುವಾನಾ ಮತ್ತು ಪ್ರಜ್ಞಾನಂದ ಈ ಟೂರ್ನಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಹಿಕಾರು ನಕಾಮುರಾ ಮತ್ತು ವಿದಿತ್ ಗುಜರಾತಿ ತಲಾ ಮೂರು ಪಾಯಿಂಟ್ಸ್ ಶೇಖರಿಸುವ ಮೂಲಕ ಎರಡನೇ ಸ್ಥಾನದಲ್ಲಿದ್ದರೆ. ಅಬಸೋವ್ ಮತ್ತು ಅಲಿರೇಝಾ ಕೊನೆಯ ಸ್ಥಾನದಲ್ಲಿದ್ದಾರೆ.