* ಜುಲೈ 11, 2025ರಂದು ಪ್ಯಾರಿಸ್ನಲ್ಲಿ ನಡೆದ 47ನೇ ವಿಶ್ವ ಪಾರಂಪರಿಕ ಸಮಿತಿಯಲ್ಲಿ ಕ್ಯಾಂಬೋಡಿಯಾದ ಖ್ಮೇರ್ ರೂಜ್ ಆಡಳಿತದ ಅವಧಿಗೆ ಸಂಬಂಧಿಸಿದ ಮೂರು ಸ್ಥಳಗಳನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸಲಾಯಿತು.* ಈ ನಿರ್ಧಾರವು ಆ ಆಡಳಿತಕ್ಕೆ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕೈಗೊಂಡು, ಶಾಂತಿ ಮತ್ತು ಶಿಕ್ಷಣಕ್ಕೆ ಉತ್ತೇಜನ ನೀಡುವ ಉದ್ದೇಶ ಹೊಂದಿದೆ.ವಿಶ್ವ ಪಟ್ಟಿ ಸೇರಿಸಲಾದ ಸ್ಥಳಗಳು :• ಟುಲ್ ಸ್ಲೆಂಗ್ ನರಹತ್ಯೆ ಮ್ಯೂಸಿಯಂ (ಎಸ್-21) – ಪೂರ್ವದಲ್ಲಿ ಹೈಸ್ಕೂಲ್, ನಂತರ 15,000 ಮಂದಿಗೆ ಯಾತನೆ ನೀಡಲಾದ ಕಾರಾಗೃಹ.• ಎಂ-13 ಜೈಲು– ಕಾಂಪೊಂಗ್ ಛ್ನಾಂಗ್ ಪ್ರಾಂತ್ಯದ ಗುಪ್ತ ಖ್ಮೇರ್ ರೂಜ್ ಕಾರಾಗೃಹ.• ಚೋಯುಂಗ್ ಏಕ್ ಕಿಲ್ಲಿಂಗ್ ಫೀಲ್ಡ್ಸ್ – ಸಾಮೂಹಿಕ ಹತ್ಯೆಗಳ ಸ್ಥಳ; ‘ದಿ ಕಿಲ್ಲಿಂಗ್ ಫೀಲ್ಡ್ಸ್’ ಚಲನಚಿತ್ರದಿಂದ ಪ್ರಸಿದ್ಧ.* ಪ್ರಧಾನಿ ಹನ್ ಮಾನೆಟ್ ಈ ಘೋಷಣೆಯನ್ನು ಶ್ಲಾಘಿಸಿದರು ಮತ್ತು ಶಾಂತಿಯ ಸಂಕೇತವಾಗಿ ಡಪ್ಪೆ ಬಾರಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು. ತಜ್ಞ ಯುಕ್ ಛಾಂಗ್ ಈ ಸ್ಥಳಗಳು ಯುವಪೀಳಿಗೆಗೆ ಪಾಠ ಕಲಿಸುವ ಪ್ರಮುಖ ನೆಲೆಗಳಾಗುತ್ತವೆ ಎಂದರು.* ಹಿಂದಿನ ಮಾನ್ಯತೆಗಳ ಪೈಕಿ ಮೊದಲ ಇತ್ತೀಚಿನ ಸ್ಮಾರಕಗಳುಈ ಪಟ್ಟಿ ಸೇರ್ಪಡೆ ಪುರಾತನ ಸ್ಮಾರಕಗಳ ಪಕ್ಕದಲ್ಲಿ ಇತ್ತೀಚಿನ ಇತಿಹಾಸವನ್ನು ಗುರುತಿಸುವ ಹೊಸ ಹೆಜ್ಜೆಯಾಗಿದೆ.* ಈ ಮೊದಲು ಅಂಗ್ಕೋರ್, ಪ್ರಿಯಾ ವಿಹಾರ್, ಸಾಂಬೋ ಪ್ರೈ ಕುಕ್, ಕೊಹ್ ಕೇರ್ ಎಂಬ ಹಳೆಯ ಸ್ಮಾರಕಗಳು ಮಾತ್ರ ಪಟ್ಟಿಯಲ್ಲಿದ್ದವು.* 1975–79ರಲ್ಲಿ ಖ್ಮೇರ್ ರೂಜ್ ಆಡಳಿತದಲ್ಲಿ ಸುಮಾರು 17 ಲಕ್ಷ ಜನರು ಬಲಿಯಾದರು. ವಿಯೆಟ್ನಾಂ 1979ರಲ್ಲಿ ಆ ಆಡಳಿತವನ್ನು ಕೆಡವಿತು. ಕ್ರೂರತೆಯ ಈ ನೆಲೆಗಳು ಇನ್ನುಮುಂದೆ ಜಗತ್ತಿಗೆ ನೆನಪಿನ ಬೋಧನೆಯಾಗಲಿವೆ.