* ಲೇಖನ ಸಾಮಗ್ರಿಗಳ ಪ್ರತಿಷ್ಠಿತ ತಯಾರಿಕಾ ಸಂಸ್ಥೆ ಕ್ಯಾಮ್ಲಿನ್‌ನ ಸಂಸ್ಥಾಪಕ ಸುಭಾಷ್ ದಾಂಡೇಕರ್ ಸೋಮವಾರ (ಜುಲೈ 15) ನಿಧನರಾಗಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಸೆಂಟ್ರಲ್ ಮುಂಬೈನಲ್ಲಿ ಸುಭಾಷ್ ದಾಂಡೇಕರ್ ಅವರ ಅಂತ್ಯಕ್ರಿಯೆ ನಡೆಸಲಾಯಿತು.* ಜನಪ್ರಿಯ ಲೇಖನ ಸಾಮಗ್ರಿ ತಯಾರಿಕಾ ಸಂಸ್ಥೆಯಾದ ಕ್ಯಾಮ್ಲಿನ್ ಅನ್ನು ಜಪಾನಿನ ಕೊಕುಯೊಗೆ ಮಾರಾಟ ಮಾಡಿದ ನಂತರ, ದಾಂಡೇಕರ್ ಕೊಕುಯೊ ಕ್ಯಾಮ್ಲಿನ್ ಸಂಸ್ಥೆಯ ಗೌರವಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.* ಕಳೆದ ಮೂರು ದಶಕಗಳಿಂದ ಕ್ಯಾಮ್ಲಿನ್ ಲೇಖನ ಸಾಮಗ್ರಿಗಳು ಮಕ್ಕಳ ನಡುವೆ ಅತ್ಯಂತ ಜನಪ್ರಿಯವಾಗಿದ್ದವು. ಕ್ಯಾಮ್ಲಿನ್ ಕಂಪಾಸ್, ಪೆನ್ಸಿಲ್, ಜಾಮಿಟ್ರಿ ಬಾಕ್ಸ್ ಈಗಲೂ ಅತ್ಯಂತ ಬೇಡಿಕೆಯ ಲೇಖನ ಸಾಮಗ್ರಿಗಳಾಗಿ ಉಳಿದುಕೊಂಡು ಬಂದಿವೆ.