* ಜ್ಞಾನ, ಯೋಗಕ್ಷೇಮ ಮತ್ತು ನಾವೀನ್ಯತೆ ನಗರ (KWIN City) ನಿರ್ಮಾಣ ಕಾರ್ಯಕ್ಕೆ ಸೆಪ್ಟೆಂಬರ್ 26( ಗುರುವಾರ)ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು. * ಕ್ವಿನ್ ಸಿಟಿ ಯೋಜನೆಯು ಭವಿಷ್ಯದ ಕರ್ನಾಟಕದ ದೃಷ್ಟಿಯನ್ನು ಪ್ರತಿನಿಧಿಸುತ್ತದೆ. ಜ್ಞಾನ, ಆರೋಗ್ಯ, ನಾವೀನ್ಯತೆ ಮತ್ತು ಸಂಶೋಧನೆಗೆ ಅತ್ಯಾಧುನಿಕ ಕೇಂದ್ರವಾಗಿದೆ.* 5,800 ಎಕರೆಗಳಲ್ಲಿ ಹರಡಿರುವ ಪ್ರಸ್ತಾವಿತ ಕ್ವಿನ್ ಸಿಟಿಯು ಕರ್ನಾಟಕದ ವ್ಯಾಪಾರ ಪ್ರದೇಶದ ಭೂದೃಶ್ಯವನ್ನು ಮರುವ್ಯಾಖ್ಯಾನಿಸುತ್ತದೆ.ಮೊದಲ ಹಂತದಲ್ಲಿ ಎರಡು ಸಾವಿರ ಎಕರೆಗಳಲ್ಲಿ ಸಾಕಾರಗೊಳ್ಳಲಿದೆ.* 5 ಲಕ್ಷ ಜನವಸತಿ ನೆಕೆಗೊಳಿಸುವ ಗುರಿಯೊಂದಿಗೆ ಆರಂಭವಾಗುತ್ತಿರುವ ಪ್ರದೇಶದಲ್ಲಿ ಶೇ.40ರಷ್ಟು ಜಾಗವನ್ನು ಮೀಸಲಿಡಲಾಗುತ್ತಿದೆ.* ಕ್ವಿನ್ ಸಿಟಿಯು ಡಾಬಸ್ ಪೇಟೆ ಮತ್ತು ದೊಡ್ಡಬಳ್ಳಾಪುರ ನಡುವೆ ಇರುತ್ತದೆ, ಬೆಂಗಳೂರು ವಿಮಾನ ನಿಲ್ದಾಣದಿಂದ ಕೇವಲ 45 ನಿಮಿಷಗಳ ಪ್ರಯಾಣ, ನಗರ ಕೇಂದ್ರದಿಂದ 50 ಕಿಮೀ ಮತ್ತು ಬೆಂಗಳೂರು-ಪುಣೆ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇಯಿಂದ ಐದು ಕಿಮೀ ದೂರದಲ್ಲಿದೆ ಎಂದು ಹೇಳಿದರು.* ಕ್ವಿನ್ ಸಿಟಿಯು ಡಾಬಸ್ ಪೇಟೆ ಮತ್ತು ದೊಡ್ಡಬಳ್ಳಾಪುರ ನಡುವೆ ನಿರ್ಮಾಣವಾಗುತ್ತಿದೆ. ಬೆಂಗಳೂರು ವಿಮಾನ ನಿಲ್ದಾಣದಿಂದ ಕೇವಲ 45 ನಿಮಿಷಗಳ ಪ್ರಯಾಣ, ನಗರ ಕೇಂದ್ರದಿಂದ 50 ಕಿಮೀ ಮತ್ತು ಬೆಂಗಳೂರು-ಪುಣೆ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇಯಿಂದ ಐದು ಕಿಮೀ ದೂರದಲ್ಲಿದೆ.* ಇದು ಬೆಂಗಳೂರು-ಹುಬ್ಬಳ್ಳಿ-ಮುಂಬೈ ಎಕ್ಸ್‌ಪ್ರೆಸ್ ರೈಲು ಮಾರ್ಗ ಮತ್ತು ರಾಷ್ಟ್ರೀಯ ಹೆದ್ದಾರಿ 44 ಮತ್ತು 648ರ ಸಾಮೀಪ್ಯದ ಮೂಲಕ ತಡೆರಹಿತ ಸಂಪರ್ಕದೊಂದಿಗೆ ದಟ್ಟಣೆಯನ್ನು ಕಡಿಮೆ ಮಾಡುವ, ಅನುಕೂಲತೆಯನ್ನು ಹೆಚ್ಚಿಸುವ ಅಂತರ-ಸಾರಿಗೆ ವ್ಯವಸ್ಥೆಗಳನ್ನು ಹೊಂದಿರುತ್ತದೆ.* 465 ಎಕರೆಯಲ್ಲಿ 0.69 ಮೆಗಾವಾಟ್ ಸಾಮರ್ಥ್ಯದ  ಸೌರವಿದ್ಯುತ್ ಘಟಕ ಸ್ಥಾಪನೆಯಾಗಲಿದೆ. 200 ಎಕರೆಯಲ್ಲಿ ವರ್ಷಕ್ಕೆ ಏಳು ಸಾವಿರ ಬೆಳೆಯಲಾಗುತ್ತದೆ.* ಶೇಕಡ 50ರಿಂದ 70ರಷ್ಟು ಜಲ ಮರುಪೂರಣ ವ್ಯವಸ್ಥೆಯನ್ನು ನಗರ ಒಳಗೊಂಡಿರುತ್ತದೆ. ಒಟ್ಟು 40 ಸಾವಿರ ಕೋಟಿ ಹೂಡಿಕೆ ಮಾಡಲಾಗುತ್ತಿದೆ.