* ಕಳೆದ ವರ್ಷ ಪತ್ತೆಹಚ್ಚಲಾದ '2024 ವೈಆರ್4' ಕ್ಷುದ್ರಗ್ರಹ 2027ರಲ್ಲಿ ಸೂರ್ಯನ ಸಮೀಪ ಬರಲಿದ್ದು 2032ರ ವೇಳೆಗೆ ಭೂಮಿಗೆ ಅಪ್ಪಳಿಸುವ ಸಾಧ್ಯತೆ ಇದೆ.* 2032ರಲ್ಲಿ ಗ್ರಹಾಂತರ ಉಲ್ಕೆಯು ಭೂಮಿಗೆ ತಾಕುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ತಜ್ಞರನ್ನು ನೇಮಿಸಲಾಗುತ್ತಿದೆ.* ಈ ಕ್ಷುದ್ರ ಗ್ರಹದಿಂದ ಉಂಟಾಗುವ ಸಂಭವನೀಯ ಹಾನಿ ತಪ್ಪಿಸಲು ಚೀನಾದಲ್ಲಿ 'ಗ್ರಹ ರಕ್ಷಣಾ ಪಡೆ' ರಚಿಸಲಾಗುತ್ತಿದೆ. ಈ ಪಡೆಗಾಗಿ 16 ಮಂದಿ ತಂತ್ರಜ್ಞಾನ ಹಾಗೂ ಕೈಗಾರಿಕಾ ಆಡಳಿತವು ಪರಿಣಿತರನ್ನು ನೇಮಿಸಿಕೊಳ್ಳಲು ಚೀನಾದ ವಿಜ್ಞಾನ, ಚಾಟ್ ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತುಗಳನ್ನೂ ಪ್ರಕಟಿಸಿದೆ.* ಏರೋಸ್ಪೇಸ್ ಇಂಜಿನಿಯರಿಂಗ್ ಪದವಿ ಅಥವಾ ಉಲ್ಕಾ ಶಿಲೆ ಪತ್ತೆಯಲ್ಲಿ ಪರಿಣತಿ ಹೊಂದಿರುವ, 35 ವರ್ಷಕ್ಕಿಂತ ಕಡಿಮೆ ವಯಸ್ಸಿನ, ಸ್ನಾತಕೋತ್ತರ ಪದವಿಗಿಂತಲೂ ಹೆಚ್ಚಿನ ಅಧ್ಯಯನ ಮಾಡಿದವರನ್ನು ಈ ಹುದ್ದೆಗಳಿಗೆ ನೇಮಕ ಮಾಡಲಾಗುತ್ತದೆ.* ರಾಜ್ಯ ವಿಜ್ಞಾನ, ತಂತ್ರಜ್ಞಾನ ಮತ್ತು ಕೈಗಾರಿಕಾ ಸಂಸ್ಥೆಯು ನಿಕಟ ಭೂ ಉಲ್ಕೆಗಳ ಮೇಲ್ವಿಚಾರಣೆ ಮತ್ತು ಮುನ್ಸೂಚನೆ ಕುರಿತ ಸಂಶೋಧನೆಗೆ ಮೂವರು ತಜ್ಞರನ್ನು ನೇಮಿಸಲು ಉದ್ದೇಶಿಸಿದೆ.* ನಾಸಾ 2024 YR4 ಉಲ್ಕೆಯ ಭೂಮಿಯೊಂದಿಗೆ ಘರ್ಷಣೆಯ ಸಾಧ್ಯತೆಯನ್ನು 1.3% ರಿಂದ 2.3%ಕ್ಕೆ ಹೆಚ್ಚಿಸಿದ್ದು, ಇದರಿಂದ ಆತಂಕ ಉಂಟಾಗಿದೆ.* 130-300 ಅಡಿ ವಿಸ್ತಾರವಿರುವ ಈ ಉಲ್ಕೆಯು ಮಹಾ ನಾಶವನ್ನುಂಟುಮಾಡಲು ಸಾಕಷ್ಟು ದೊಡ್ಡದಾಗಿದೆ. ಇದು ಟೊರಿನೋ ಹಾನಿ ಮಾಪಕದಲ್ಲಿ 3 ರಷ್ಟು ದರ್ಜೆ ಪಡೆದಿದೆ.