* ಕರ್ನಾಟಕ ಸಾಫ್ಟ್ಬಾಲ್ ಪ್ರೀಮಿಯರ್ ಲೀಗ್ (KSPL) ಎರಡನೇ ಆವೃತ್ತಿ ನವೆಂಬರ್ 1ರಿಂದ 29ರ ವರೆಗೆ ನಡೆಯಲಿದೆ. ಸೋಮವಾರ(ಆಗಸ್ಟ್ 15) ಜೆರ್ಸಿ ಅನಾವರಣ ಕಾರ್ಯಕ್ರಮ ನಡೆಯಿತು.* ನಟ ಶಿವರಾಜ್ ಕುಮಾರ್ ಟೂರ್ನಿಗೆ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.* ಕಾರ್ಯಕ್ರಮದಲ್ಲಿ ನಟ ಶಶಿಕುಮಾರ್, ನಿವೃತ್ತ ಐಎಎಸ್ ಅಧಿಕಾರಿಗಳ ಸಂಘದ ಅಧ್ಯಕ್ಷ ಆನಿಲ್ ಕುಮಾರ್, ಜಯ ಕರ್ನಾಟಕ ಸಂಘಟನೆ ಬೆಂಗಳೂರು ಅಧ್ಯಕ್ಷ ಯೋಗನಂದ ಬಿ, ಕರ್ನಾಟಕ ಲೀಗಲ್ ಸೆಲ್ ಕಾರ್ಯದರ್ಶಿ ಮೋಹನ್ ಕುಮಾರ್ ನಲ್ವಾಡ್ ಹಾಗೂ ಸಾರಿಗೆ ಉಪ ಆಯುಕ್ತ ಮಂಜುನಾಥ್ ಭಾಗವಹಿಸಿದರು.* ವಿಧಾನಪರಿಷತ್ ಸದಸ್ಯ ಟಿ.ಎ. ಶರವಣ ಅವರು ಕ್ರೀಡಾ ಚಟುವಟಿಕೆ ನಿರಂತರವಾಗಿ ನಡೆಯಬೇಕೆಂದು ಹುರಿದುಂಬಿಸಿದರು. * ಈ ಬಾರಿ 8 ಗುಂಪುಗಳಲ್ಲಿ ಒಟ್ಟು 32 ತಂಡಗಳು ಭಾಗವಹಿಸಲಿದೆ. ಕದಂಬ, ಗಂಗ, ಚಾಲುಕ್ಯ, ರಾಷ್ಟ್ರಕೂಟ, ಹೊಯ್ಸಳ, ವಿಜಯನಗರ, ಕೆಳದಿ ಮತ್ತು ಮೈಸೂರು ಸಾಮ್ರಾಜ್ಯ ಎಂಬ ಹೆಸರಿನಲ್ಲಿ ಗುಂಪುಗಳನ್ನು ರಚಿಸಲಾಗಿದೆ. ವಿಜೇತ ತಂಡಕ್ಕೆ ₹1 ಕೋಟಿ ನಗದು ಬಹುಮಾನ ಘೋಷಿಸಲಾಗಿದೆ.* ಅಧ್ಯಕ್ಷ ಗಂಗಾಧರ ರಾಜು ಮತ್ತು ಪದಾಧಿಕಾರಿಗಳೊಂದಿಗೆ ಹಲವಾರು ಗಣ್ಯರು ಹಾಗೂ ನಟಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.