* ಕನ್ನಡ ಸಾಹಿತ್ಯ ಪರಿಷತ್ತು ನೀಡುವ 'ಡಾ. ಮಳಲಿ ವಸಂತ ಕುಮಾರ್ ಪ್ರಶಸ್ತಿ'ಗೆ ವಿಮರ್ಶಕ ಹಾಗೂ ಮಾಜಿ ಪ್ರಾಧ್ಯಾಪಕ ಡಾ. ಸಿ. ನಾಗಣ್ಣ ಅವರನ್ನು ಆಯ್ಕೆ ಮಾಡಲಾಗಿದೆ.* ಬರಹಗಾರ ಮಳಲಿ ವಸಂತ ಕುಮಾರ್ ಅವರ ನೆನಪಿನಲ್ಲಿ ಕುಟುಂಬಸ್ಥರು ಸ್ಥಾಪಿಸಿದ ದತ್ತಿ ನಿಧಿಯಿಂದ ಈ ಪ್ರಶಸ್ತಿ ನೀಡಲಾಗುತ್ತದೆ. ಅವರು ಕನ್ನಡ ಪರ ಹೋರಾಟಗಾರರಾಗಿದ್ದು, 46 ಕೃತಿಗಳನ್ನು ರಚಿಸಿದ್ದರು.* ಕಸಾಪ ಅಧ್ಯಕ್ಷ ಮಹೇಶ ಜೋಶಿ ನೇತೃತ್ವದ ಸಮಿತಿ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಈ ಪ್ರಶಸ್ತಿ ಕನ್ನಡ ಸೇವೆಗೆ ಮಹತ್ವದ ಕೊಡುಗೆ ನೀಡಿದವರು ಮತ್ತು ಹೋರಾಟಗಾರರಿಗೆ ನೀಡಲಾಗುತ್ತದೆ.* ನಾಗಣ್ಣ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಭಾಷಾಂತರ ಕ್ಷೇತ್ರದಲ್ಲೂ ಅವರು ಅಪೂರ್ವ ಕೊಡುಗೆ ನೀಡಿದ್ದಾರೆ ಎಂದು ಕಸಾಪ ಮಾಧ್ಯಮ ವಿಭಾಗದ ಎನ್.ಎಸ್. ಶ್ರೀಧರ ಮೂರ್ತಿ ತಿಳಿಸಿದ್ದಾರೆ.