* ಕನ್ನಡ ಸಾಹಿತ್ಯ ಪರಿಷತ್ತಿನ ಎ.ಆರ್. ನಾರಾಯಣ ಘಟ್ಟ ಮತ್ತು ಸರೋಜಮ್ಮ ಗಾಂಧಿ ಪುದವಟ್ಟು ದತ್ತಿ ಪುರಸ್ಕಾರಕ್ಕೆ 2025ನೇ ಸಾಲಿಗೆ ಕರ್ನಾಟಕ ಸರ್ವೋದಯ ಮಹಾಮಂಡಲದ ಅಧ್ಯಕ್ಷ ಡಾ. ಎಚ್.ಎಸ್. ಸುರೇಶ್ ಅವರನ್ನು ಆಯ್ಕೆ ಮಾಡಲಾಗಿದೆ.* ಈ ಪುರಸ್ಕಾರವನ್ನು ಗಾಂಧಿವಾದಿ ಎ.ಆರ್. ನಾರಾಯಣ ಘಟ್ಟ ಅವರು, ಗಾಂಧೀಜಿ ಆದರ್ಶಗಳನ್ನು ಅಳವಡಿಸಿಕೊಂಡು ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುವ ಸಾಧಕರನ್ನು ಗೌರವಿಸಲು ಸ್ಥಾಪಿಸಿದ್ದಾರೆ.* ಡಾ. ಸುರೇಶ್ ಅವರು ರಾಜ್ಯ ಸರ್ವೋದಯ ಮಹಾಮಂಡಲದ ಅಧ್ಯಕ್ಷರಾಗಿದ್ದು, ಬರಹಗಾರರಾಗಿ ಮತ್ತು ರಂಗಭೂಮಿ ಮೂಲಕ ಗಾಂಧಿವಾದದ ಪ್ರಚಾರಕರಾಗಿದ್ದಾರೆ.* ಅವರು ಜೂನಿಯರ್ ರೆಡ್ ಕ್ರಾಸ್ ಹಾಗೂ ರಾಷ್ಟ್ರೀಯ ಸೇವಾ ಯೋಜನೆಗೆ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ;