* ವ್ಯವಸಾಯ ಮತ್ತು ರೈತ ಕಲ್ಯಾಣ ಸಚಿವಾಲಯವು "ಕ್ರಾಪಿಕ್" (CROPIC) ಎಂಬ ಅಧ್ಯಯನವನ್ನು ಪ್ರಾರಂಭಿಸಲು ಯೋಜಿಸಿದೆ.* CROPIC ಎಂಬುದು ಬೆಳೆಗಳ ತಕ್ಷಣದ ನಿರೀಕ್ಷಣೆ ಮತ್ತು ಚಿತ್ರಗಳ ಸಂಗ್ರಹ (Collection of Real Time Observations & Photo of Crops) ಇದು ಬೆಳೆಗಳ ನಿಜ ಸಮಯದ ಚಿತ್ರಗಳನ್ನು ಸಂಗ್ರಹಿಸಿ, ಅವುಗಳ ಆರೋಗ್ಯ ಹಾಗೂ ನಷ್ಟವನ್ನು ವಿಶ್ಲೇಷಿಸಲು ಉಪಯೋಗಿಸುವ ಡಿಜಿಟಲ್ ಉಪಕ್ರಮ* ಈ ಅಧ್ಯಯನವು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ(PMFBY)ಯಡಿ ಜಾರಿಗೆ ಬರಲಿದೆ. ಇದರ ಮೂಲಕ ಬೆಳೆ ಗುರುತು ಡೈರೆಕ್ಟರಿ ರಚನೆ, ನಷ್ಟದ ನಿಖರ ಮೌಲ್ಯಮಾಪನ ಮತ್ತು ರೈತರಿಗೆ ಸ್ವಯಂಚಾಲಿತ ಪರಿಹಾರ ಪಾವತಿಗೆ ಸಹಾಯ ಮಾಡುವುದು ಮುಖ್ಯ ಉದ್ದೇಶವಾಗಿದೆ.* ಕೃಷಿ ಹಂಗಾಮಿನಲ್ಲಿ ರೈತರು ತಮ್ಮ ಬೆಳೆಗಳ ಫೋಟೋಗಳನ್ನು CROPIC ಮೊಬೈಲ್ ಆ್ಯಪ್ ಮೂಲಕ ಅಪ್ಲೋಡ್ ಮಾಡುತ್ತಾರೆ. ಈ ಫೋಟೋಗಳು ಕ್ಲೌಡ್ ಆಧಾರಿತ ಎಐ ತಂತ್ರಜ್ಞಾನದಿಂದ ವಿಶ್ಲೇಷಿಸಲಾಗುತ್ತದೆ. ವೆಬ್ ಡ್ಯಾಶ್ಬೋರ್ಡ್ ಮೂಲಕ ವೀಕ್ಷಣೆಯ ಅವಕಾಶವೂ ಇದೆ.* ಈ ಪೈಲಟ್ ಯೋಜನೆ 2025ರ ಖರೀಫ್ ಮತ್ತು 2025-26ರ ರಬಿ ಹಂಗಾಮುಗಳಲ್ಲಿ 50 ಜಿಲ್ಲೆಗಳ ಮಟ್ಟದಲ್ಲಿ ಆರಂಭವಾಗಲಿದೆ. 2026ರಿಂದ ದೇಶವ್ಯಾಪಿ ಜಾರಿಗೆ ನಿರೀಕ್ಷಿಸಲಾಗಿದೆ.* CROPIC ಯೋಜನೆಗೆ PMFBY ಅಡಿಯಲ್ಲಿ ಇರುವ ಫಂಡ್ ಫಾರ್ ಇನೊವೆಷನ್ ಅಂಡ್ ಟೆಕ್ನಾಲಜಿ (FIAT) ನಿಂದ ಹಣ ನೀಡಲಾಗುತ್ತದೆ. FIAT ಅಡಿಯಲ್ಲಿ ₹825 ಕೋಟಿ ರೂಪಾಯಿಯ ಮೊತ್ತವನ್ನು ಮೀಸಲಾಗಿಸಲಾಗಿದೆ.* CROPIC ಎನ್ನುವುದು ರೈತರ ನಷ್ಟ ಮೌಲ್ಯಮಾಪನವನ್ನು ನಿಖರಗೊಳಿಸಲು, ಪರಿಹಾರ ವೇಗವಿಲ್ಲದಿದ್ದ ಸಮಸ್ಯೆಯನ್ನು ದೂರ ಮಾಡಿಸಲು ಮತ್ತು ಡಿಜಿಟಲ್ ಕೃಷಿ ವಿಮಾ ವ್ಯವಸ್ಥೆಯನ್ನು ಬಲಪಡಿಸಲು ರೂಪಿಸಲಾಗಿರುವ ಮಹತ್ವದ ತಂತ್ರಜ್ಞಾನ ಆಧಾರಿತ ಯೋಜನೆಯಾಗಿದೆ.