* ಆಂಧ್ರಪ್ರದೇಶದ ಪೊಲೀಸರು ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ನಾಗಾರ್ಜುನ ಸಾಗರ ಜಲಾಶಯದ 26 ಗೇಟ್‌ಗಳ ಪೈಕಿ 13 ಗೇಟ್‌ಗಳನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. * ನಲಗೊಂಡ ಜಿಲ್ಲೆಯ ವಿಜಯಪುರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ತೆಲಂಗಾಣ ಸರ್ಕಾರವು, ಈ ವಿಷಯವನ್ನು ಕೇಂದ್ರ ಜಲಶಕ್ತಿ ಸಚಿವಾಲಯದ ಗಮನಕ್ಕೂ ತಂದಿದೆ.* ಶಸ್ತ್ರಸಜ್ಜಿತರಾಗಿ ಬಂದಿದ್ದ ಆಂಧ್ರಪ್ರದೇಶದ 500 ಪೊಲೀಸ್ ಸಿಬ್ಬಂದಿ ನಾಗಾರ್ಜುನ ಸಾಗರ ಜಲಾಶಯದ 26 ಗೇಟ್‌ಗಳ ಪೈಕಿ 13 ಗೇಟ್‌ಗಳು ಮತ್ತು ಬಲನಾಲೆಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ.