* ನ್ಯಾನೋ ತಂತ್ರಜ್ಞಾನವು 1 ರಿಂದ 100 ನ್ಯಾನೋ ಮೀಟರ್ ಮಟ್ಟದ ವಸ್ತುಗಳನ್ನು ಬಳಸುವ ವಿಜ್ಞಾನ. ಒಂದು ನ್ಯಾನೋ ಮೀಟರ್ ಕೂದಲಿಗಿಂತ ಲಕ್ಷ ಪಟ್ಟು ಚಿಕ್ಕದು.* ಈ ತಂತ್ರಜ್ಞಾನವು ವೈದ್ಯಕೀಯ, ಪರಿಸರ, ಎಲೆಕ್ಟ್ರಾನಿಕ್ಸ್, ಕೃಷಿ ಹೀಗೆ ಹಲವಾರು ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿದೆ.* ಗೊಬ್ಬರವನ್ನು ನ್ಯಾನೋ ಗಾತ್ರಕ್ಕೆ ತಂದು ನೇರವಾಗಿ ಕಾಂಡ, ಎಲೆ ಅಥವಾ ಬೇರುಗಳಿಗೆ ಸಿಂಪಡಿಸುವುದೇ ನ್ಯಾನೋ ಗೊಬ್ಬರ. ಇದು ಕಡಿಮೆ ಪ್ರಮಾಣದಲ್ಲಿ ಹೆಚ್ಚು ಪರಿಣಾಮ ನೀಡುತ್ತದೆ, ಸುಲಭವಾಗಿ ಸಂಗ್ರಹಿಸಬಹುದು ಮತ್ತು ಇಳುವರಿಯೂ ಉತ್ತಮವಾಗಿರುತ್ತದೆ.* ಸೂಕ್ಷ್ಮ ಗಾತ್ರ: ಸಸ್ಯಗಳು ಬೇಗ ಮತ್ತು ಹೆಚ್ಚು ಪೋಷಕಾಂಶ ಹೀರಿಕೊಳ್ಳುತ್ತವೆ.* ನಿಧಾನ ಬಿಡುಗಡೆ: ಪೋಷಕಾಂಶ ನಿಧಾನವಾಗಿ ಬಿಡುಗಡೆಯಾಗುತ್ತದೆ, ಅದರಿಂದ ಮರುಮರು ಸಿಂಪಡಣೆ ಅಗತ್ಯವಿಲ್ಲ.* ಪರಿಣಾಮಕಾರಿ: 500 ಮಿ.ಲೀ. ನ್ಯಾನೋ ಯೂರಿಯಾ = 45 ಕೆ.ಜಿ. ಸಾಮಾನ್ಯ ಯೂರಿಯಾ.* ಪರಿಸರ ಸ್ನೇಹಿ: ರಾಸಾಯನಿಕ ಸೋರಿಕೆ ಮತ್ತು ಜಲಮಾಲಿನ್ಯ ಕಡಿಮೆಯಾಗುತ್ತದೆ; ಹಸಿರುಮನೆ ಅನಿಲಗಳ ಹೊರಸೂಸುವಿಕೆಯಲ್ಲಿ ಇಳಿಕೆ.* IFFCO, NFL, ಟಾಟಾ ಕೆಮಿಕಲ್ಸ್ ಮುಂತಾದ ಸಂಸ್ಥೆಗಳು ನ್ಯಾನೋ ಗೊಬ್ಬರ ತಯಾರಿಸಿ ಲಕ್ಷಾಂತರ ರೈತರಿಗೆ ತಲುಪಿಸುತ್ತಿವೆ. ಭಾರತವೇ ಜಗತ್ತಿನಲ್ಲಿ ಅತಿ ಹೆಚ್ಚು ನ್ಯಾನೋ ಗೊಬ್ಬರ ತಯಾರಿಸುವ ದೇಶ. ಮುಂದಿನ ದಿನಗಳಲ್ಲಿ ರಾಸಾಯನಿಕ ಗೊಬ್ಬರ ಬಳಕೆ ಶೇ 50ರಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ.* ನ್ಯಾನೋ ಗೊಬ್ಬರವು ಸುಸ್ಥಿರ ಕೃಷಿಗೆ ಮಹತ್ತರ ಹೆಜ್ಜೆ. ಇದು ಇಳುವರಿ ಹೆಚ್ಚಿಸುವುದರ ಜೊತೆಗೆ ಪರಿಸರವನ್ನು ಕಾಪಾಡುತ್ತದೆ. ಭಾರತವು ಈ ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸಿಕೊಂಡು ಜಗತ್ತಿಗೆ ಮಾದರಿಯಾಗಿದೆ.