* 'ಪ್ರಧಾನ ಮಂತ್ರಿ ಧನ್ ಧಾನ್ಯ ಕೃಷಿ ಯೋಜನೆ' (PMDDKY) ಎಂಬ ಹೊಸ ಯೋಜನೆ ಜಾರಿಗೆ ಬರಲಿದ್ದು,ಇದು ದೇಶದ ರೈತರ ಜೀವನಮಟ್ಟವನ್ನು ಸುಧಾರಿಸಲು ಮತ್ತು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವ ಗುರಿ ಹೊಂದಿದೆ.* ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಕೃಷಿ ಅಭಿವೃದ್ಧಿಯನ್ನು ಹೆಚ್ಚಿಸಲು ಪ್ರಧಾನ ಮಂತ್ರಿ ಕೃಷಿ ಯೋಜನೆಯನ್ನು ಪ್ರಾರಂಭಿಸುತ್ತಿದೆ. * ಈ ಯೋಜನೆ ದೇಶದ ಕೃಷಿ ಜಿಲ್ಲೆಗಳನ್ನು ಅಭಿವೃದ್ಧಿಪಡಿಸುತ್ತಿದೆ. ಕಡಿಮೆ ಇಳುವರಿ ಬೆಳೆಗಳನ್ನು ಬೆಳೆಯುತ್ತಿರುವ 100 ಜಿಲ್ಲೆಗಳಿಗೆ 'ಪ್ರಧಾನಮಂತ್ರಿ ಧನ ಧಾನ್ಯ' ಕೃಷಿ ಯೋಜನೆಯು ಅನ್ವಯವಾಗಲಿದೆ ಎಂದು ಸೀತಾರಾಮನ್ ಅವರು ತಿಳಿಸಿದರು.* ಪ್ರಸ್ತುತ ಕಡಿಮೆ ಕೃಷಿ ಉತ್ಪಾದನೆಯನ್ನು ಹೊಂದಿರುವ 100 ಜಿಲ್ಲೆಗಳನ್ನು ಪ್ರಧಾನ ಮಂತ್ರಿ ಕೃಷಿ ಯೋಜನೆ ಒಳಗೊಂಡಿರುತ್ತದೆ. ಜತೆಗೆ ಬೆಳೆ ತೀವ್ರತೆಯನ್ನು ನಿಯಂತ್ರಿಸಲು ಮತ್ತು ಸರಾಸರಿಗಿಂತ ಕಡಿಮೆಯಿರುವ ಕ್ರೆಡಿಟ್ ನಿಯತಾಂಕಗಳನ್ನು (Below Average Credit Parameters) ಪರಿಹರಿಸಲು ಉದ್ದೇಶಿಸಿದೆ. * ಒಟ್ಟಾರೆ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಹೀಗಾಗಿ ಬೆಳೆ ವೈವಿದ್ಯೀಕರಣ ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಿ ಎಂದು ಸೂಚಿಸಿದರು. ಹೆಚ್ಚುವರಿಯಾಗಿ ಬ್ಲಾಕ್ ಮಟ್ಟದಲ್ಲಿ ಸುಗ್ಗಿಯ ನಂತರದ ಶೇಖರಣಾ ಸೌಲಭ್ಯಗಳನ್ನು ಹೆಚ್ಚಿಸುವ ಯೋಜನೆಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದರು.