* ಕರ್ನಾಟಕದಲ್ಲಿ ಕೃತಕ ಬುದ್ಧಿಮತ್ತೆ ಕೇಂದ್ರವನ್ನು ಸ್ಥಾಪಿಸಲು ವಿಶ್ವ ಆರ್ಥಿಕ ವೇದಿಕೆಯೊಂದಿಗೆ ರಾಜ್ಯ ಸರ್ಕಾರವು ಫೆಬ್ರುವರಿ 29 ರಂದು ಒಪ್ಪಂದ ಪತ್ರಕ್ಕೆ ಸಹಿ ಹಾಕಿದೆ. ಇದು ಭಾರತದಲ್ಲಿ ಕೃತಕ ಬುದ್ಧಿಮತ್ತೆಗೆ ಮೀಸಲಾದ ವಿಶ್ವ ಆರ್ಥಿಕ ವೇದಿಕೆಯ ಏಕೈಕ ಕೇಂದ್ರವಾಗಿರಲಿದೆ.* ಕರ್ನಾಟಕದಲ್ಲಿ ಸ್ಥಾಪನೆಯಾಗಲಿರುವ ಕೇಂದ್ರವು ವಿಶ್ವ ಆರ್ಥಿಕ ವೇದಿಕೆಯ ‘ಸೆಂಟರ್ ಫಾರ್ ಫೋರ್ತ್ ಇಂಡಸ್ಟ್ರಿಯಲ್ ರೆವಲ್ಯೂಷನ್ (ಸಿ4ಐಆರ್) ನೆಟ್‌ವರ್ಕ್‌’ನ ಭಾಗವಾಗಿರಲಿದೆ. ಈ ಕೇಂದ್ರವು ಉದ್ಯಮ ಕ್ಷೇತ್ರ ಮತ್ತು ಶಿಕ್ಷಣ ಸಂಸ್ಥೆಗಳ ಜಾಲವನ್ನು ಸ್ಥಾಪಿಸಲು ನೆರವಾಗಲಿದೆ. ತಂತ್ರಜ್ಞಾನದ ವಿನಿಮಯ, ಸಂಶೋಧನಾ ಸಹಯೋಗಗಳ ಉತ್ತೇಜನಕ್ಕೆ ಸಹಕಾರಿಯಾಗಿರಲಿದೆ.* ಜಾಗತಿಕವಾಗಿ ಕೃತಕ ಬುದ್ಧಿಮತ್ತೆಗೆ ವಿಫುಲ ಅವಕಾಶವುಳ್ಳ ಅಗ್ರ ಐದು ನಗರಗಳಲ್ಲಿ ಬೆಂಗಳೂರು ಗುರುತಿಸಲ್ಪಟ್ಟಿದೆ ಎಂದು ಕರ್ನಾಟಕ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ತಿಳಿಸಿದ್ದಾರೆ.* ವಿಶ್ವಾದ್ಯಂತ ಇತರ ಪ್ರಾದೇಶಿಕ ಕೇಂದ್ರಗಳೊಂದಿಗೆ ಸಂಪರ್ಕ ಸಾಧಿಸುವ ಮೂಲಕ ಕರ್ನಾಟಕ ಕೇಂದ್ರವು ಜಾಗತಿಕ ಮಟ್ಟದಲ್ಲಿ ಕೊಡುಗೆ ನೀಡುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದೆ.