* ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ (ಪ.ಜಾ) ಒಳ ಮೀಸಲಾತಿ ಕಲ್ಪಿಸುವ ಉದ್ದೇಶದಿಂದ "ಪರಿಶಿಷ್ಟ ಜಾತಿ, ಉಪ ಜಾತಿ ಸಮಗ್ರ ಸಮೀಕ್ಷೆ – 2025" ಎಂಬ ಹೆಸರಿನ ಸಮೀಕ್ಷೆಯನ್ನು ರಾಜ್ಯ ಸರ್ಕಾರ ಮೇ 5 ರಿಂದ ಆರಂಭಿಸಲಿದೆ.* ಈ ಸಮೀಕ್ಷೆಯು ಮೂರು ಹಂತಗಳಲ್ಲಿ ನಡೆಯಲಿದ್ದು, ಪ್ರಥಮ ಹಂತದಲ್ಲಿ ಮನೆ ಮನೆಗೆ ತೆರಳಿ ಗಣತಿ ಮಾಡಿ, ಉಪಜಾತಿಗಳ ಜನಸಂಖ್ಯೆ, ಆರ್ಥಿಕ ಸ್ಥಿತಿ, ಉದ್ಯೋಗ, ಭೂಮಾಲೀಕತ್ವ ಮುಂತಾದ ಮಾಹಿತಿ ಸಂಗ್ರಹಿಸಲಾಗುತ್ತದೆ. ಈ ಮಾಹಿತಿಯನ್ನು ವಿಶ್ಲೇಷಿಸಿದ ಬಳಿಕ ಒಳ ಮೀಸಲಾತಿ ನೀತಿಯನ್ನು ರೂಪಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ.* ಈ ಸಮೀಕ್ಷೆಯು ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ದಾಸ್ ನೇತೃತ್ವದ ಆಯೋಗದ ಶಿಫಾರಸಿನ ಮೇರೆಗೆ ನಡೆಯುತ್ತಿದ್ದು, ಇದರ ಅನುಷ್ಠಾನಕ್ಕಾಗಿ ರಾಜ್ಯಮಟ್ಟದ ಸಮನ್ವಯ ಸಮಿತಿಯು ರೂಪುಗೊಂಡಿದೆ.* ಈ ಸಮಿತಿಗೆ ಅಭಿವೃದ್ಧಿ ಆಯುಕ್ತೆ ಉಮಾ ಮಹಾದೇವನ್ ಅಧ್ಯಕ್ಷರಾಗಿದ್ದಾರೆ. ಸಮೀಕ್ಷೆ ಮೊಬೈಲ್ ಆ್ಯಪ್ ಬಳಸಿ ನಡೆಸಲಾಗುತ್ತದೆ.ಮೂರು ಹಂತಗಳಲ್ಲಿ ನಡೆಯುವ ಸಮೀಕ್ಷೆಯು –ಹಂತ 1: ಮೇ 5 ರಿಂದ 17ರ ತನಕ ಮನೆ ಮನೆಗೆ ತೆರಳಿ ದತ್ತಾಂಶ ಸಂಗ್ರಹ.ಹಂತ 2: ಮೇ 19 ರಿಂದ 21ರ ತನಕ ಮತಗಟ್ಟೆ ಪ್ರದೇಶಗಳಲ್ಲಿ ಶಿಬಿರಗಳ ಮೂಲಕ ಮಾಹಿತಿ ಸಂಗ್ರಹ.ಹಂತ 3: ಮೇ 19 ರಿಂದ 21ರೊಳಗೆ ಆನ್ಲೈನ್ ಮೂಲಕ ಭಾಗವಹಿಸುವ ಅವಕಾಶ.* ಸಮೀಕ್ಷೆಯಲ್ಲಿ ಜನಸಂಖ್ಯೆ, ಶಿಕ್ಷಣ, ವೃತ್ತಿ, ವಾಸಸ್ಥಳ, ಸೌಲಭ್ಯಗಳು, ಆರ್ಥಿಕ ಮಾಹಿತಿ, ಸರ್ಕಾರಿ/ಖಾಸಗಿ ಉದ್ಯೋಗ, ಭೂಮಿಯ ಮಾಲೀಕತ್ವ, ಆದಾಯ ಮತ್ತು ರಾಜಕೀಯ ಪ್ರಾತಿನಿಧ್ಯದ ಕುರಿತು ಮಾಹಿತಿ ಕಲೆಹಾಕಲಾಗುತ್ತದೆ. ಉಪಜಾತಿಯ ವಿವರವನ್ನು ನಮೂದಿಸುವುದು ಕಡ್ಡಾಯವಾಗಿರುತ್ತದೆ.