Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಕರ್ನಾಟಕದಲ್ಲಿ ಮೊದಲ ಬಾರಿ ಗೋಚರಿಸಿದ ಅಪರೂಪದ ‘ಚಂದನ ಚಿರತೆ’
3 ಜನವರಿ 2026
* ರಾಜ್ಯದ ವಿಜಯನಗರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಅತಿವಿರಳವಾದ ಚಿರತೆಯೊಂದು ಪತ್ತೆಯಾಗಿದ್ದು, ಇದಕ್ಕೆ
‘ಚಂದನ ಚಿರತೆ’
ಎಂದು ಹೆಸರಿಡಲಾಗಿದೆ. ಸಾಮಾನ್ಯವಾಗಿ ಹಳದಿ–ಕಂದು ಬಣ್ಣದ ಚರ್ಮ ಮತ್ತು ಗಾಢ ಕಪ್ಪು ಚುಕ್ಕೆಗಳನ್ನು ಹೊಂದಿರುವ ಚಿರತೆಗಳಿಗಿಂತ ವಿಭಿನ್ನವಾಗಿ, ಈ ಚಿರತೆಯು
ಗಂಧದ ಬಣ್ಣವನ್ನು ಹೋಲುವ ಕೆಂಪು–ಗುಲಾಬಿ ಮಿಶ್ರಿತ ತುಪ್ಪಳ
ಹಾಗೂ
ಮಂಕಾದ ಕಂದು ಬಣ್ಣದ ಚುಕ್ಕೆಗಳನ್ನು
ಹೊಂದಿದೆ.
*ಜಾಗತಿಕವಾಗಿ ಈ ಸ್ವರೂಪದ ಚಿರತೆಯನ್ನು
‘ಸ್ಟ್ರಾಬೆರಿ ಚಿರತೆ’ (Strawberry Leopard)
ಎಂದು ಕರೆಯಲಾಗುತ್ತದೆ. ಆದರೆ, ಸ್ಥಳೀಯ ಸಾಂಸ್ಕೃತಿಕ ಗುರುತನ್ನು ನೀಡುವ ಉದ್ದೇಶದಿಂದ ಹಾಗೂ ಕರ್ನಾಟಕದ ಪರಂಪರೆಯನ್ನು ಪ್ರತಿಬಿಂಬಿಸಲು ಇದಕ್ಕೆ
‘ಚಂದನ ಚಿರತೆ’
ಎಂದು ನಾಮಕರಣ ಮಾಡಲಾಗಿದೆ ಎಂದು ಎಚ್ಎನ್ಎಫ್ ತಿಳಿಸಿದೆ.
* ಕಲ್ಯಾಣ ಕರ್ನಾಟಕ ಭಾಗದಲ್ಲಿ ವನ್ಯಜೀವಿ ಅಧ್ಯಯನ ನಡೆಸುತ್ತಿರುವ
ಹೊಳೆಮತ್ತಿ ನೇಚರ್ ಫೌಂಡೇಶನ್ (HNF)
ತಂಡವು ವಿಜಯನಗರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಅಳವಡಿಸಿದ್ದ ಕ್ಯಾಮೆರಾ ಟ್ರ್ಯಾಪ್ಗಳಲ್ಲಿ ಈ ಅಪರೂಪದ ಚಿರತೆ ಹಲವು ಬಾರಿ ಸೆರೆಯಾಗಿದೆ. ವನ್ಯಜೀವಿ ತಜ್ಞರ ಪ್ರಕಾರ, ಜಗತ್ತಿನಾದ್ಯಂತ ಈ ರೀತಿಯ ಬಣ್ಣದ ಚಿರತೆಗಳು ಅತಿ ವಿರಳವಾಗಿ ಮಾತ್ರ ಕಾಣಿಸಿಕೊಂಡಿವೆ.
* ಈ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಕೆಲ ಬಾರಿ, ತಾಂಜೇನಿಯಾದಲ್ಲಿ ಒಮ್ಮೆ ಹಾಗೂ 2021ರಲ್ಲಿ ರಾಜಸ್ಥಾನದ ರಣಕಪುರದಲ್ಲಿ ಇಂತಹ ಚಿರತೆ ಪತ್ತೆಯಾಗಿತ್ತು.
ಭಾರತದಲ್ಲಿ ಇದು ಎರಡನೇ ಬಾರಿ
, ಮತ್ತು
ಕರ್ನಾಟಕದಲ್ಲಿ ಇದೇ ಮೊದಲ ಬಾರಿ
ಈ ಬಣ್ಣದ ಚಿರತೆ ಕಾಣಿಸಿಕೊಂಡಿದೆ.
* ವನ್ಯಜೀವಿ ತಜ್ಞರ ಅಂದಾಜಿನ ಪ್ರಕಾರ, ಇದು
6–7 ವರ್ಷ ವಯಸ್ಸಿನ ಹೆಣ್ಣು ಚಿರತೆ
ಆಗಿದ್ದು, ಸಾಮಾನ್ಯ ಬಣ್ಣದ ಮರಿಚಿರತೆಯೊಂದಿಗೆಯೇ ಅರಣ್ಯದಲ್ಲಿ ಕಾಣಿಸಿಕೊಂಡಿರುವುದು ವಿಶೇಷವಾಗಿದೆ. ಈ ಅಪರೂಪದ ಪತ್ತೆ ಕರ್ನಾಟಕದ ವನ್ಯಜೀವಿ ವೈವಿಧ್ಯತೆಗೆ ಮತ್ತೊಂದು ಮಹತ್ವದ ಸಾಕ್ಷಿಯಾಗಿದೆ.
Take Quiz
Loading...