* ನೇರಳೆ ಅಥವಾ ಜಾಮೂನ್ ಹಣ್ಣು ಬೇಸಿಗೆ ಕಾಲದಲ್ಲಿ ಸಿಗುವ ಸೀಸನಲ್ ಹಣ್ಣಾಗಿದೆ. ಇದು ರುಚಿಕರವಾಗಿದ್ದು, ಹುಳಿ-ಸಿಹಿ ರುಚಿಯೊಂದಿಗೆ ಹಲವು ಔಷಧೀಯ ಗುಣಗಳನ್ನು ಹೊಂದಿದೆ. ಹಳ್ಳಿ ಭಾಗಗಳಲ್ಲಿ ಈ ಮರಗಳು ಸಾಮಾನ್ಯವಾಗಿ ಕಂಡುಬರುತ್ತವೆ.* ಇದೀಗ ನೇರಳೆ ಹಣ್ಣು ಜಾಗತಿಕ ಮಟ್ಟದಲ್ಲಿ ಮಾನ್ಯತೆ ಪಡೆದುಕೊಂಡಿದೆ. ಇದೇ ಮೊದಲ ಬಾರಿಗೆ ಈ ಹಣ್ಣುಗಳನ್ನು ಕರ್ನಾಟಕದಿಂದ ಲಂಡನ್ಗೆ ರಫ್ತು ಮಾಡಲಾಗುತ್ತಿದೆ.* ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (APEDA) ಈ ರಫ್ತಿಗೆ ಚಾಲನೆ ನೀಡಿದ್ದು, ಇದು ಭಾರತೀಯ ಸಾಂಪ್ರದಾಯಿಕ ಹಣ್ಣುಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗೆ ತಲುಪಿಸುವ ದಿಕ್ಕಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ.