* ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬಡ ಮಕ್ಕಳ ಭವಿಷ್ಯಕ್ಕೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ‘ಟ್ರಂಪ್ ಖಾತೆ’ ಎಂಬ ಯೋಜನೆಯನ್ನು 2025ರಿಂದ 2029ರ ಅವಧಿಗೆ ಜಾರಿಗೆ ತರುವ ಚಿಂತನೆ ಮಾಡಿದ್ದಾರೆ.* ಈ ಯೋಜನೆಯು ಕರ್ನಾಟಕದಲ್ಲಿ 2006ರಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಜಾರಿಗೆ ಬಂದ ಭಾಗ್ಯಲಕ್ಷ್ಮೀ ಬಾಂಡ್ ಯೋಜನೆಯ ಮಾದರಿಯಲ್ಲಿದೆ.* ಯೋಜನೆಯ ಪ್ರಕಾರ, ಈ ಅವಧಿಯಲ್ಲಿ ಜನನವಾದ ಪ್ರತಿಯೊಂದು ಮಗುವಿನ ಹೆಸರಿನಲ್ಲಿ ಒಂದು ಖಾಸಗಿ ಖಾತೆ ತೆರೆಯಲಾಗುತ್ತದೆ. ಕೇಂದ್ರ ಸರ್ಕಾರ ಒಂದು ಬಾರಿ $1,000 (ಸುಮಾರು ₹85,500) ಮೊತ್ತವನ್ನು ಈ ಖಾತೆಗೆ ಜಮೆ ಮಾಡುತ್ತದೆ.* ಮಗುವಿನ ಪೋಷಕರು ವರ್ಷಕ್ಕೆ $5,000 (ಸುಮಾರು ₹4.2 ಲಕ್ಷ) ವರೆಗೆ ಜಮೆ ಮಾಡಬಹುದಾಗಿದೆ. ಈ ಹಣವನ್ನು ಷೇರುಪೇಟೆ ಮೂಲಕ ಹೂಡಿಕೆ ಮಾಡಲಾಗುತ್ತದೆ, ಹಾಗು ಈ ಆದಾಯದ ಮೇಲೆ ತೆರಿಗೆ ವಿಧಿಸಲಾಗುವುದಿಲ್ಲ.* ಮಗು 21 ವರ್ಷವಾದಾಗ ಮಾತ್ರ ಖಾತೆಯ ಹಣವನ್ನು ಬಳಸಲು ಅವಕಾಶವಿರುತ್ತದೆ. ಈ ಯೋಜನೆ ಜಾರಿಗೆ ಬರುವುದಕ್ಕೆ ಟ್ರಂಪ್ ಅವರು ತಮ್ಮ ಹೊಸ ತೆರಿಗೆ ಮಸೂದೆಗೆ ಸಂಸತ್ತಿನ ಅನುಮೋದನೆ ಬೇಕೆಂದು ಷರತ್ತು ವಿಧಿಸಿದ್ದಾರೆ.