* ಕರ್ನಾಟಕ ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಅವರು ಜೂನ್ 21 ರಂದು ಮೈಸೂರಿನಲ್ಲಿ ರಾಷ್ಟ್ರೀಯ ಯೋಗ ಒಲಂಪಿಯಾಡ್ 2024 ಅನ್ನು ಉದ್ಘಾಟಿಸಿದರು. * ಹರ್ ಘರ್ ಯೋಗದ ಮೂಲಕ ಕರ್ನಾಟಕವನ್ನು ಭಾರತದ ಯೋಗ-ಸಾಕ್ಷರತೆಯ ಪ್ರಮುಖ ರಾಜ್ಯವನ್ನಾಗಿ ಮಾಡಲು ರಾಜ್ಯವು ಶ್ರಮಿಸುತ್ತಿದೆ ಎಂದು ತಾವರಚಂದ್ ಗೆಹ್ಲೋಟ್ ಅವರು ತಿಳಿಸಿದರು.* ಸ್ವಾಮಿ ವಿವೇಕಾನಂದರನ್ನು ಉಲ್ಲೇಖಿಸಿ ಭಾರತದ ಸಾಂಸ್ಕೃತಿಕ ಪರಂಪರೆಗೆ ಯೋಗದ ಕೊಡುಗೆ ಮತ್ತು ಆಧ್ಯಾತ್ಮಿಕ ಯೋಗಕ್ಷೇಮವನ್ನು ಬೆಳೆಸುವಲ್ಲಿ ಅದರ ಪಾತ್ರವನ್ನು ಒತ್ತಿ ಹೇಳಿದರು.* ರಾಷ್ಟ್ರೀಯ ಯೋಗ ಒಲಂಪಿಯಾಡ್ 2024 ರ ಥೀಮ್ ಮತ್ತು ಭಾಗವಹಿಸುವಿಕೆ ಈ ವರ್ಷದ ಒಲಿಂಪಿಯಾಡ್‌ನ ವಿಷಯವು 'ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ', ಎಂಬ ಥೀಮ್ ನಡಿ ಆಚರಿಸಲಾಗುತ್ತದೆ.* ಕೇಂದ್ರ ಶಿಕ್ಷಣ ಇಲಾಖೆ, ಸ್ಥಳೀಯ ಶಿಕ್ಷಣ ಸಂಸ್ಥೆಗಳು (RIE), ಮೈಸೂರು ಮತ್ತು ದೆಹಲಿಯ ರಾಷ್ಟ್ರೀಯ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಮತ್ತು ಟ್ರೇನಿಂಗ್ (NCERT)ನ ಸಹಯೋಗದಲ್ಲಿ ಈ ರಾಷ್ಟ್ರೀಯ ಯೋಗ ಒಲಂಪಿಯಾಡ್ ನಡೆಯಲಿದೆ.