* ಕರ್ನಾಟಕ ನೌಕಾ ಪ್ರದೇಶದ ಫ್ಲಾಗ್ ಆಫೀಸರ್ ಕಮಾಂಡಿಂಗ್ ಆಗಿ ರಿಯರ್ ಅಡ್ಮಿರಲ್ ವಿಕ್ರಮ್ ಮೆನನ್ ಗುರುವಾರ(ಆಗಸ್ಟ್ 21) ಅಧಿಕಾರ ಸ್ವೀಕರಿಸಿದರು.* ಅವರು ರಕ್ಷಣಾ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದು, ಮೂರು ದಶಕಗಳ ನೌಕಾಸೇವೆ ಅನುಭವ ಹೊಂದಿದ್ದಾರೆ. ನವದೆಹಲಿಯಲ್ಲಿ ಮಿಲಿಟರಿ ವ್ಯವಹಾರಗಳ ಇಲಾಖೆಯ ನೌಕಾಪಡೆ ಮತ್ತು ರಕ್ಷಣಾ ಸಿಬ್ಬಂದಿ ವಿಭಾಗದ ಜಂಟಿ ಕಾರ್ಯದರ್ಶಿಯಾಗಿದ್ದರು.* ‘ಸೀ ಹ್ಯಾರಿಯರ್’ ವಿಮಾನದಲ್ಲಿ 2,000 ಗಂಟೆಗಳಿಗಿಂತ ಹೆಚ್ಚು ಹಾರಾಟ ನಡೆಸಿದ ಅನುಭವ ಹೊಂದಿರುವ ಅವರು, ವಿಕ್ರಮ್ ಯುದ್ಧವಿಮಾನದ ಕ್ಯಾಪ್ಟನ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.* ಅವರು ಐಎನ್ಎಸ್ ವಿರಾಟ್, ಐಎನ್ಎಸ್ ಹಂಸ, ಐಎನ್ಎಸ್ ತಿಲ್ಲಾಂಚಾಂಗ್, ಐಎನ್ಎಸ್ ಶಾರದಾ, ಐಎನ್ಎಸ್ ಶಕ್ತಿ ಸೇರಿದಂತೆ ಹಲವಾರು ಯುದ್ಧನೌಕೆಗಳನ್ನು ಮುನ್ನಡೆಸಿದ್ದಾರೆ. ಜೊತೆಗೆ ಕ್ಷಿಪಣಿ ವಿಧ್ವಂಸಕ ಐಎನ್ಎಸ್ ರಣವಿಜಯ್ ನ ಕಾರ್ಯನಿರ್ವಾಹಕ ಅಧಿಕಾರಿಯಾಗಿಯೂ ಕೆಲಸ ಮಾಡಿದ್ದಾರೆ.