* ಕರ್ನಾಟಕ ರಾಜ್ಯ ಹಾಕಿ ತಂಡದ ಮಾಜಿ ಗೋಲ್ ಕೀಪರ್ ಮತ್ತು ಅಂತಾರಾಷ್ಟ್ರೀಯ ಹಾಕಿ ಕೋಚ್ ರಾದ 61 ವರ್ಷ ವಯಸ್ಸಿನ ಖಾಲೀದ್ ಎಂ ಮೋದಿ ಅವರು ನಿಧನರಾದರು.* 1980 ಮತ್ತು 90ರ ದಶಕದಲ್ಲಿ ತಮ್ಮ ಗೋಲ್‌ಕೀಪಿಂಗ್ ಚಾಕಚಾಕ್ಯತೆಯ ಮೂಲಕ ಹೆಸರಾಗಿದ್ದ ಖಾಲೀದ್ ಅವರಿಗೆ ವಿಶ್ವಕಪ್ ಮತ್ತು ಒಲಿಂಪಿಕ್ ಟೂರ್ನಿಗಳಲ್ಲಿ ಅಡುವ ಭಾರತ ತಂಡಗಳಲ್ಲಿ ಹಲವು ಅವಕಾಶಗಳು ತಪ್ಪಿದ್ದವು. ಖಾಲೀದ್ ಕರ್ನಾಟಕ ಮತ್ತು ಕೆನರಾ ಬ್ಯಾಂಕ್ ತಂಡದ ಗೋಲ್‌ಕೀಪರ್ ಆಗಿದ್ದರು.* 1983ರಲ್ಲಿ ಕೆನ್ಯಾ ಪ್ರವಾನ ಮಾಡಿದ್ದ ಭಾರತ ಜೂನಿಯರ್ ಹಾಕಿ ತಂಡದಲ್ಲಿ ನಾನು ಮತ್ತು ಖಾಲೀದ್ ಜೊತೆಗೆ ಇದ್ದೆವು. ಆ ಟೂರ್ನಿಯಲ್ಲಿ ಅವರು ಅದ್ಭುತವಾಗಿ ಕೀಪಿಂಗ್ ಮಾಡಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ಅವರು ಸೀನಿಯರ್ ತಂಡದಲ್ಲಿ ಸ್ಥಾನ ಪಡೆಯುವುದು ಖಚಿತ. ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡುವರು ಎಂಬ ಭರವನೆ ನಮ್ಮೆಲ್ಲರಲ್ಲೂ ಮೂಡಿತ್ತು' ಎಂದು ಒಲಿಂಪಿಯನ್ ಹಾಕಿ ಆಟಗಾರ ಜೂಡ್ ಫೆಲಿಕ್ಸ್ ಅವರು ನೆನಪಿಸಿಕೊಂಡರು.