* ಕರ್ಣಾಟಕ ಬ್ಯಾಂಕ್ ತನ್ನ ಮಧ್ಯಂತರ ವ್ಯವಸ್ಥಾಪಕ ನಿರ್ದೇಶಕ (MD) ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಸ್ಥಾನಕ್ಕೆ ರಾಘವೇಂದ್ರ ಶ್ರೀನಿವಾಸ ಭಟ್ ಅವರನ್ನು ನೇಮಿಸಿದೆ. ಅವರು ಜುಲೈ 16ರಿಂದ ಅಧಿಕಾರ ವಹಿಸಲಿದ್ದಾರೆ.* ಹಾಲಿ ಎಂಡಿ ಹಾಗೂ ಸಿಇಒ ಶ್ರೀಕೃಷ್ಣ ಹರಿಹರ ಶರ್ಮಾ ರಾಜೀನಾಮೆ ನೀಡಿದ್ದರಿಂದ ಈ ಹುದ್ದೆ ಖಾಲಿಯಾಗಿತ್ತು.* ವೈಯಕ್ತಿಕ ಕಾರಣಗಳಿಂದ ಶರ್ಮಾ ಅವರು ರಾಜೀನಾಮೆ ಸಲ್ಲಿಸಿದ್ದು, ಕಾರ್ಯನಿರ್ವಾಹಕ ನಿರ್ದೇಶಕ ಶೇಖರ್ ರಾವ್ ಅವರೂ ಮಂಗಳೂರಿಗೆ ಹೋಗಲು ನಿರಾಕರಿಸಿ ರಾಜೀನಾಮೆ ನೀಡಿದ್ದರು.* ರಾಘವೇಂದ್ರ ಭಟ್ ಅವರು 1981ರಲ್ಲಿ ಸಹಾಯಕರಾಗಿ ತಮ್ಮ ಬ್ಯಾಂಕಿಂಗ್ ವೃತ್ತಿ ಆರಂಭಿಸಿದ್ದರು. ಜುಲೈ 2ರಂದು ಸಿಒಒ ಆಗಿ ಅಧಿಕಾರ ವಹಿಸಿಕೊಂಡಿದ್ದು, ಈಗ ಮಧ್ಯಂತರ ಎಂಡಿಯಾಗಿ ಮುಂದಿನ ಮೂರು ತಿಂಗಳು ಸೇವೆ ನೀಡಲಿದ್ದಾರೆ.* ಈ ನೇಮಕ ಕುರಿತು ಭಟ್ ಪ್ರತಿಕ್ರಿಯಿಸಿ, “ಬ್ಯಾಂಕ್ನ ಶತಮಾನಗಳ ಹೆಸರನ್ನು ಇನ್ನಷ್ಟು ಬಲಪಡಿಸಲು ನಂಬಿಕೆ ಮತ್ತು ಭಾಗಿತ್ವದೊಂದಿಗೆ ಕೆಲಸ ಮಾಡುವೆ” ಎಂದು ಹೇಳಿದ್ದಾರೆ.