Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಕಾಯ್ದೆ 2025: ಕೊಡಗಿನ 'ಜಮ್ಮಾ ಬಾನೆ' ಜಮೀನು ದಾಖಲೆಗಳ ಸುಧಾರಣೆ
Authored by:
Akshata Halli
Date:
17 ಜನವರಿ 2026
➤ ಕರ್ನಾಟಕ ಸರ್ಕಾರವು ಕೊಡಗು ಜಿಲ್ಲೆಯ ವಿಶಿಷ್ಟ ಭೂ ಹಿಡುವಳಿ ಪದ್ಧತಿಯಾದ
'ಜಮ್ಮಾ ಬಾನೆ' (Jamma Bane)
ಜಮೀನು ದಾಖಲೆಗಳಲ್ಲಿನ ದೋಷಗಳನ್ನು ಸರಿಪಡಿಸಲು
ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ) ಕಾಯ್ದೆ 2025
ಅನ್ನು ಜಾರಿಗೆ ತಂದಿದೆ. ಈ ತಿದ್ದುಪಡಿ ಕಾಯ್ದೆಗೆ ಜನವರಿ 7, 2026 ರಂದು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ಅಂಕಿತ ಹಾಕಿದ್ದಾರೆ.
➤
ಜಮ್ಮಾ ಬಾನೆ
ಎನ್ನುವುದು ಕೊಡಗು ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ ಒಂದು ವಿಶಿಷ್ಟ ಅನುವಂಶಿಕ ಭೂ ಹಿಡುವಳಿ ಪದ್ಧತಿಯಾಗಿದೆ. 17 ರಿಂದ 19 ನೇ ಶತಮಾನದ ಅವಧಿಯಲ್ಲಿ ಕೊಡಗಿನ ಅರಸರು ಮತ್ತು ನಂತರ ಬ್ರಿಟಿಷರು, ಸೈನಿಕ ಸೇವೆಯನ್ನು ಪರಿಗಣಿಸಿ ಅಲ್ಲಿನ ನಿವಾಸಿಗಳಿಗೆ ಈ ಜಮೀನುಗಳನ್ನು ನೀಡಿದ್ದರು. ಇದು ಮುಖ್ಯವಾಗಿ ಭತ್ತದ ಗದ್ದೆಗಳು ಮತ್ತು ಕಾಡುಗಳಿಂದ ಕೂಡಿದ ಎತ್ತರದ ಪ್ರದೇಶಗಳನ್ನು ಒಳಗೊಂಡಿದೆ. ಇವುಗಳಲ್ಲಿ ಹೆಚ್ಚಿನವು ಇಂದು ಕಾಫಿ ತೋಟಗಳಾಗಿ ಮಾರ್ಪಟ್ಟಿವೆ.
➤ ಈ ತಿದ್ದುಪಡಿಯು ಕೊಡಗು ಜಿಲ್ಲೆಯ ತಹಶೀಲ್ದಾರ್ಗಳಿಗೆ 'ಜಮ್ಮಾ ಬಾನೆ' ಜಮೀನಿನ ಹಳೆಯ ದಾಖಲೆಗಳನ್ನು ಸರಿಪಡಿಸಲು ಕಾನೂನುಬದ್ಧ ಅಧಿಕಾರ ನೀಡುವ ಮೂಲಕ ಭೂ ಮಾಲೀಕತ್ವದ ಗೊಂದಲಗಳನ್ನು ನಿವಾರಿಸಿ, ಕಂದಾಯ ವ್ಯವಸ್ಥೆಯನ್ನು ಆಧುನೀಕರಿಸುವ ಗುರಿ ಹೊಂದಿದೆ.
➤ ತಿದ್ದುಪಡಿಯ ಅಗತ್ಯ:-
=>
ದಾಖಲೆಗಳಲ್ಲಿನ ವ್ಯತ್ಯಾಸ:
ತಲೆಮಾರುಗಳು ಕಳೆದರೂ ಭೂ ದಾಖಲೆಗಳಲ್ಲಿ (RTC) ಮೂಲ ಮಾಲೀಕರ (
ಪಟ್ಟೇದಾರರ
) ಹೆಸರೇ ಮುಂದುವರಿಯುತ್ತಿತ್ತು. ಇದು ಉತ್ತರಾಧಿಕಾರ ಮತ್ತು ಮಾಲೀಕತ್ವದ ಹಕ್ಕುಗಳನ್ನು ಸಾಬೀತುಪಡಿಸಲು ಅಡ್ಡಿಯಾಗಿತ್ತು.
=>
ಆರ್ಥಿಕ ಅಡೆತಡೆಗಳು:
ಜಮೀನು ದಾಖಲೆಗಳು ಸರಿಯಾಗಿ ಇಲ್ಲದ ಕಾರಣ ಬ್ಯಾಂಕ್ ಸಾಲ ಪಡೆಯಲು, ಜಮೀನು ಮಾರಾಟ ಮಾಡಲು ಮತ್ತು ನೋಂದಣಿ ಪ್ರಕ್ರಿಯೆಗಳಲ್ಲಿ ರೈತರು ತೊಂದರೆ ಅನುಭವಿಸುತ್ತಿದ್ದರು.
=>
ಕಾನೂನು ಸಂಘರ್ಷ:
1964 ರ ಕರ್ನಾಟಕ ಭೂ ಕಂದಾಯ ಕಾಯ್ದೆ ಜಾರಿಗೆ ಬಂದಿದ್ದರೂ, ಕೊಡಗಿನ ಹಳೆಯ ಪದ್ಧತಿಯಿಂದಾಗಿ ದಾಖಲೆಗಳಲ್ಲಿ ಗೊಂದಲ ಮುಂದುವರಿದಿತ್ತು.
➤ ಕಾಯ್ದೆಯ ಪ್ರಮುಖ ಬದಲಾವಣೆಗಳು ಮತ್ತು ಪ್ರಯೋಜನಗಳು:-
=>
ತಹಶೀಲ್ದಾರ್ಗಳಿಗೆ ಅಧಿಕಾರ:
ಕರ್ನಾಟಕ ಭೂ ಕಂದಾಯ ಕಾಯ್ದೆ 1964 ರ
ಸೆಕ್ಷನ್ 127
ಕ್ಕೆ ಹೊಸ ಉಪ-ವಿಭಾಗವನ್ನು ಸೇರಿಸಲಾಗಿದೆ. ಇದರ ಅನ್ವಯ, ತಹಶೀಲ್ದಾರ್ಗಳು ಸೂಕ್ತ ವಿಚಾರಣೆ ನಡೆಸಿ ಹಳೆಯ ದಾಖಲೆಗಳನ್ನು ಸರಿಪಡಿಸಬಹುದು.
=>
ಬೋಮಿ (Bhoomi) ಯೋಜನೆಗೆ ಪೂರಕ:
ಈ ತಿದ್ದುಪಡಿಯು ರಾಜ್ಯದ ಭೂ ದಾಖಲೆಗಳ ಡಿಜಿಟಲೀಕರಣ ಪ್ರಕ್ರಿಯೆಗೆ ಹೆಚ್ಚಿನ ವೇಗ ನೀಡಲಿದೆ.
=>
ಅಪೀಲು ಸಲ್ಲಿಸುವ ಅವಕಾಶ:
ಕಂದಾಯ ಅಧಿಕಾರಿಗಳ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲಾಗಿದ್ದು, ಇದು ಪಾರದರ್ಶಕತೆಯನ್ನು ಖಚಿತಪಡಿಸುತ್ತದೆ.
=>
ಸಾಮಾಜಿಕ ಪರಿಣಾಮ:
ಕೊಡಗಿನ ಮೂಲ ನಿವಾಸಿಗಳಿಗೆ ತಮ್ಮ ಭೂಮಿಯ ಮೇಲೆ ಕಾನೂನುಬದ್ಧ ಹಕ್ಕು ದೊರೆಯಲಿದ್ದು, ದೀರ್ಘಕಾಲದ ಭೂ ವಿವಾದಗಳು ಇತ್ಯರ್ಥವಾಗಲಿವೆ.
➤ ಈ ಐತಿಹಾಸಿಕ ತಿದ್ದುಪಡಿಯು ಕೊಡಗು ಜಿಲ್ಲೆಯ ಭೂ ಆಡಳಿತವನ್ನು ಆಧುನೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಇದು ಕೇವಲ ದಾಖಲೆಗಳ ತಿದ್ದುಪಡಿಯಲ್ಲದೆ, ಅಲ್ಲಿನ ರೈತ ಸಮುದಾಯದ ಆರ್ಥಿಕ ಸಬಲೀಕರಣಕ್ಕೆ ನಾಂದಿ ಹಾಡಲಿದೆ.
Take Quiz
Loading...