* ಅ.1ರಿಂದ ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ನಗದುರಹಿತ ಚಿಕಿತ್ಸೆ ಒದಗಿಸುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ (KASS) ಅಧಿಕೃತವಾಗಿ ಜಾರಿಯಾಗಲಿದೆ.* ಈ ಯೋಜನೆ ಹಲವು ವರ್ಷಗಳಿಂದ ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದ್ದರೂ ಈಗ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ದಿನಾಂಕ ನಿಗದಿಗೊಳಿಸಿ ಆದೇಶ ಹೊರಡಿಸಿದೆ.* ಸುಮಾರು 5.20 ಲಕ್ಷ ಸರ್ಕಾರಿ ನೌಕರರು, ನಿಗಮ–ಮಂಡಳಿ–ಅನುದಾನಿತ ಸಂಸ್ಥೆಗಳ 3 ಲಕ್ಷ ಸಿಬ್ಬಂದಿ ಮತ್ತು ಅವರ ಕುಟುಂಬ ಸದಸ್ಯರಿಗೆ ಇದರ ಲಾಭ ಸಿಗಲಿದೆ. ಈ ಬಾರಿ ಮಹಿಳಾ ನೌಕರರ ತಂದೆ–ತಾಯಿಗೂ ಆರೋಗ್ಯ ಸೌಲಭ್ಯ ವಿಸ್ತರಿಸಲಾಗಿದೆ.* ಯೋಜನೆಯ ಅನುಷ್ಠಾನ ಹೊಣೆ ಸುವರ್ಣ ಕರ್ನಾಟಕ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ವಹಿಸಿಕೊಂಡಿದ್ದು, ನೌಕರರು ಪ್ರತಿ ತಿಂಗಳು ಕಂತು ಪಾವತಿಸಬೇಕು. ಇಚ್ಛಿಸದವರು ಅ.18ರೊಳಗೆ ಲಿಖಿತ ಆಕ್ಷೇಪ ಸಲ್ಲಿಸಬಹುದು.* ಪತಿ–ಪತ್ನಿ ಇಬ್ಬರೂ ನೌಕರರಾಗಿದ್ದರೆ ಕಂತು ಒಬ್ಬರ ವೇತನದಿಂದ ಮಾತ್ರ ಕಡಿತವಾಗುತ್ತದೆ. ಇತರೆ ಸರ್ಕಾರಿ ಸಂಸ್ಥೆಗಳ ನೌಕರರ ಕಂತುಗಳನ್ನು ಸಂಸ್ಥೆಗಳೇ ಕಡಿತ ಮಾಡಿ ನೇರವಾಗಿ ಟ್ರಸ್ಟ್ಗೆ ಜಮೆ ಮಾಡಬೇಕು. ಎಲ್ಲರ ಕಂತುಗಳನ್ನು ಅಕ್ಟೋಬರ್ ತಿಂಗಳ ವೇತನದಿಂದಲೇ ಕಡಿತಗೊಳಿಸಲು ಸೂಚಿಸಲಾಗಿದೆ.